ಉಪ್ಪಿನಂಗಡಿ : ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಳು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತ( 20 )ಎಂಬವರು ಮಂಗಳವಾರ ನಸುಕಿನಿಂದ ನಾಪತ್ತೆ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ದಿವಂಗತ ಸೀನಪ್ಪ ಎಂಬವರ ಮಗಳಾಗಿರುವ ಈಕೆ ಸೋಮವಾರ ರಾತ್ರಿ ಎಂದಿನಂತೆ ಮಲಗಿದ್ದವರು ಮಂಗಳವಾರ ನಸುಕಿನ ವೇಳೆ ಕಾಣಿಸದೆ ಇದ್ದು, ಮೊಬೈಲ್ ಫೋನ್ ಕರೆಯು ಸ್ವೀಕರಿಸಲಿಲ್ಲ.ಬಳಿಕ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹತ್ತನೇ ತರಗತಿವರೆಗೆ ಕಲಿತಿರುವ ಈಕೆ 4 ಅಡಿ 6 ಇಂಚು ಎತ್ತರವಿದ್ದು,ಸಪೂರ ಶರೀರ, ಉರುಟು ಮುಖವನ್ನು ಹೊಂದಿರುತ್ತಾರೆ. ಕನ್ನಡ,ತುಳು ಭಾಷೆಯನ್ನು ಮಾತನಾಡುತ್ತಾರೆ. ಈಕೆಯ ಬಗ್ಗೆ ತಿಳಿದವರು ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಸುತೇಶ್.ಎಸ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *