ಸುಳ್ಯ:
ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜನವರಿ 2ರಿಂದ 11ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಜಾತ್ರೋತ್ಸವದ ಪೂರ್ವಭಾವಿಯಾಗಿ ಡಿಸೆಂಬರ್ 27ರಂದು ಗೊನೆಮಹೂರ್ತ ನೆರವೇರಿತು.

ಗೊನೆಮಹೂರ್ತ ಕಾರ್ಯಕ್ರಮದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ಡಾ. ಹರಿಪ್ರಸಾದ್ ತುಡಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಸೇರಿದಂತೆ ಸಮಿತಿ ಸದಸ್ಯರಾದ ಎಂ. ಮೀನಾಕ್ಷಿ ಗೌಡ, ಎ. ರಮೇಶ್ ಬೈಪಾಡೀತಾಯ, ವೀರಕೇಸರಿ ಕರಣಿಕ ಮನೆ, ರಾಮಕೃಷ್ಣರಾವ್ ಮುರೂರು ಕಾಪಿನಡ್ಕ, ಕೃಪಾಶಂಕರ ತುದಿಯಡ್ಕ, ಶ್ರೀಮತಿ ಶಶಿಕಲಾ ಹರಿಪ್ರಸಾದ್, ಮೋನಪ್ಪ ಕೆರೆಮೂಳೆ, ಹೇಮನಾಥ ಕೇಪಾರ್ಲ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.
ಗೊನೆಮಹೂರ್ತದೊಂದಿಗೆ ಜಾತ್ರೋತ್ಸವದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಕಾರ್ಯಕ್ರಮಗಳು ನಡೆಯಲಿವೆ.

Leave a Reply

Your email address will not be published. Required fields are marked *