ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ತೀವ್ರ ಚಳಿಯ ಅನುಭವಕ್ಕೆ ಒಳಗಾಗಿದೆ. ಡಿಸೆಂಬರ್ 13, 2025ರಂದು ನಗರದಲ್ಲಿ ಕನಿಷ್ಠ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಳೆದ 8 ವರ್ಷಗಳಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನವಾಗಿದೆ.

ನಗರದ ಹಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಚಳಿ ಹೆಚ್ಚಾಗಿ ಕಂಡುಬಂದಿದ್ದು, ಸಾರ್ವಜನಿಕರು ಜಾಕೆಟ್‌, ಸ್ವೆಟರ್‌ ಧರಿಸಿ ಸಂಚಾರ ನಡೆಸಿದರು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಉತ್ತರ ಭಾರತದಲ್ಲಿ ಬೀಸುತ್ತಿರುವ ಚಳಿಗಾಳಿ ಹಾಗೂ ಸ್ಪಷ್ಟ ಆಕಾಶವೇ ತಾಪಮಾನ ಕುಸಿತಕ್ಕೆ ಕಾರಣವಾಗಿದೆ.

ಇದೇ ವೇಳೆ, ಬೆಂಗಳೂರಿನಲ್ಲಿ ಹಿಂದಿನ ವರ್ಷಗಳಲ್ಲಿ ಡಿಸೆಂಬರ್ 29, 1883ರಂದು 8.9 ಡಿಗ್ರಿ ಸೆಲ್ಸಿಯಸ್, ಡಿಸೆಂಬರ್ 24, 2011ರಂದು 12.8 ಡಿಗ್ರಿ ಸೆಲ್ಸಿಯಸ್ ಹಾಗೂ ಡಿಸೆಂಬರ್ 11, 2016ರಂದು 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಮುಂದಿನ ಕೆಲವು ದಿನಗಳವರೆಗೆ ಚಳಿ ಮುಂದುವರಿಯುವ ಸಾಧ್ಯತೆ ಇದ್ದು, ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ಸೂಚಿಸಿದೆ.

Leave a Reply

Your email address will not be published. Required fields are marked *