ಸುಬ್ರಹ್ಮಣ್ಯ, ಏನೇಕಲ್ಲು ಹಾಗೂ ಐನೆಕಿದು ಗ್ರಾಮಗಳ ಹಿಂದೂ ಸಂಗಮ ಸುಬ್ರಹ್ಮಣ್ಯ ಮಂಡಲದ ಸಂಯುಕ್ತ ಆಶ್ರಯದಲ್ಲಿ, ಸುಬ್ರಹ್ಮಣ್ಯ ಮಂಡಲದ ವ್ಯಾಪ್ತಿಯೊಳಗೆ ಸಮಾಜದ ಏಕತೆ, ಸಾಮರಸ್ಯ ಮತ್ತು ಸಾಮಾಜಿಕ ಪರಿವರ್ತನೆಗೆ ಒತ್ತಾಸೆಯಾಗುವ ಉದ್ದೇಶದಿಂದ ಜ.24ರಂದು “ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ” ಆಯೋಜಿಸಲಾಗಿದೆ.


ಕಾರ್ಯಕ್ರಮವು ಜ.24ರಂದು ಮಧ್ಯಾಹ್ನ 3 ಗಂಟೆಗೆ ಕಾಶಿಕಟ್ಟೆ ಮೈದಾನದಲ್ಲಿ ಆರಂಭಗೊಳ್ಳಲಿದೆ. ಮಹಾಗಣಪತಿ ಸನ್ನಿಧಾನದಿಂದ ಸುಬ್ರಹ್ಮಣ್ಯ ಮಠದವರೆಗೆ ವೈಭವಯುತ ಶೋಭಾಯಾತ್ರೆ ನಡೆಯಲಿದ್ದು, ಸಂಜೆ 3.30ರ ವೇಳೆಗೆ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಸಮಾರೋಪಗೊಳ್ಳಲಿದೆ.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದ ಶ್ರೀ ಮಧ್ವಾಚಾರ್ಯ ಸಂಪ್ರದಾಯದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ, ಶ್ರೀ ಶಂಕರಾಚಾರ್ಯ ಸಂಪ್ರದಾಯದ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.


ಕಾರ್ಯಕ್ರಮದ ಯಶಸ್ಸಿಗಾಗಿ ಸ್ಥಳೀಯ ಸಂಘಟನೆಗಳು, ಸಮಿತಿಗಳು ಹಾಗೂ ಹಿಂದೂ ಸಮಾಜದ ಸದಸ್ಯರು ಸಕ್ರಿಯವಾಗಿ ಕೈಜೋಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.



