ಪದ್ಯಾಣ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯಲಿರುವ ಏಕದಶ ಪುಣ್ಯ ನದಿಗಳ ತೀರ್ಥದ ಭವ್ಯ ಮೆರವಣಿಗೆ ಹಾಗೂ ಹೊರಕಾಣಿಕೆ ಸಮರ್ಪಣೆಯ ಪುತ್ತೂರಿನಲ್ಲಿ ಉಪಸಮಿತಿಗಳನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ರಥದ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು, ಸಂಯೋಜಕರಾಗಿ ಸಂತೋಷ್ ಕುಮಾರ್ ಕೈಕಾರ ಇವರನ್ನು ಆಯ್ಕೆ ಮಾಡಲಾಯಿತು. ಹಾಗೆಯೇ ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಸಂಯೋಜಕರಾಗಿ ಅಜಿತ್ ರೈ ಹೊಸಮನೆ ಇವರನ್ನು ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಸರ್ವ ಸಮಿತಿಗಳ ಅಧ್ಯಕ್ಷರಾಗಿ ಗೋಪಾಲಕೃಷ್ಣ ಹೇರಳೆಯವನ್ನು ಆಯ್ಕೆ ಮಾಡಲಾಗಿದೆ.

ಸ್ವಾಗತ ಸಮಿತಿಯಲ್ಲಿ ಈಶ್ವರ ಭಟ್ ಪಂಜಿಗುಡ್ಡೆ, ಡಾ. ಪ್ರಸಾದ್ ಭಂಡಾರಿ, ರಾಧಕೃಷ್ಣ ಆಳ್ವ, ಆರ್.ಸಿ. ನಾರಾಯಣ, ಡಾ. ಕೃಷ್ಣ ಪ್ರಸನ್ನ, ನಿತೀಶ್ ಕುಮಾರ್ ಶಾಂತಿನಗರ, ಸೀತಾರಾಮ ರೈ, ಶಿವಕುಮಾರ್, ಪುರುಷೋತ್ತಮ ಮಂಗ್ಲಿಮನೆ ಹಾಗೂ ಹೊರಕಾಣಿಕೆ ಸಮಿತಿಯಲ್ಲಿ ರಾಜೇಶ್ ಪರ್ಪುಂಜ, ಮೋಹನದಾಸ ಕಾಣಿಯೂರು, ಮುರಳಿಕೃಷ್ಣ ಹಸಂತಡ್ಕ, ಅಭಿಜಿತ್ ಕೊಡಿಪ್ಪಾಡಿ, ಮನೀಷ್ ಬಿರುವ, ನಿತೇಶ್ ಕಲ್ಲೇಗ, ಹರೀಶ್ ವಿಶ್ವನಾಥ ಗೌಡ ಬನ್ನೂರು, ದಿನೇಶ್ ಪಂಜಿಗ, ಕಿರಣ್ ರೈ ಬಲ್ನಾಡು, ಮಣಿಕಂಠ ಪುತ್ತೂರು, ಮಹಾಬಲ ರೈ ಪಡ್ಯಂಬೈಲು, ನಾಗೇಂದ್ರ ಬಾಳಿಗ, ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಈಶ್ವರ ನಾಯ್ಕ್ ಇವರನ್ನು ಆಯ್ಕೆ ಮಾಡಲಾಗಿದೆ.

ಈ ವೇಳೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಅರುಣ್ ಶ್ಯಾಮ್, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಕಾರ್ಯಾಧ್ಯಕ್ಷರಾದ ಶ್ಯಾಮ್ ಸುದರ್ಶನ್ ಹೊಸಮೂಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಶಿವಪ್ರಸಾದ್ ರೈ ಅನಿಯಾಲ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *