ಪುತ್ತೂರು: ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಒಳಮೊಗ್ರು ಗ್ರಾಮವನ್ನು ಪ್ರತಿನಿಧಿಸುವ ವಿಶೇಷ ಆಹ್ವಾನಿತರಾಗಿ ಆಯ್ಕೆಯಾದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಪಲ್ಲತಾರು ಅವರಿಗೆ ಪುತ್ತೂರು ಬಿಜೆಪಿ ವತಿಯಿಂದ ಗೌರವ ಸಮರ್ಪಿಸಲಾಯಿತು. ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಧ್ಯಕ್ಷೆಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್ ಹಾಗೂ ಯುವರಾಜ್ ಪೆರಿಯತ್ತೋಡಿ, ಮಂಡಲ ಉಪಾಧ್ಯಕ್ಷರಾದ ನಾಗೇಶ್ ಕೆಮ್ಮಾಯಿ, ವಿದ್ಯಾಧರ್ ಜೈನ್, ದಿವ್ಯ ಪುರುಷೋತ್ತಮ್, ವಿರೂಪಾಕ್ಷ ಭಟ್ ಉಪಸ್ಥಿತರಿದ್ದರು.

ಇದೇ ವೇಳೆ ಬಿಜೆಪಿ ಜಿಲ್ಲಾ ಫಲಾನುಭವಿಗಳ ಸಂಪರ್ಕ ಸಂಯೋಜಕ ನಿತೀಶ್ ಕುಮಾರ್ ಶಾಂತಿವನ, ‘ಮನ್ ಕೀ ಬಾತ್’ ಕಾರ್ಯಕ್ರಮದ ಮಂಡಲ ಸಂಚಾಲಕ ಪುರುಷೋತ್ತಮ್ ಮುಂಗ್ಲಿಮನೆ, ಬಿಜೆಪಿ ನಗರ ಯುವ ಮೋರ್ಚಾ ಉಪಾಧ್ಯಕ್ಷ ಸುನಿತ್ ಭಟ್, ನೆಟ್ಟನಿಗೆ–ಮುಡ್ನೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಅಜಿತ್ ರೈ ಹೊಸಮನೆ, ಒಳಮೊಗ್ರು ಶಕ್ತಿಕೇಂದ್ರ ಪ್ರಮುಖ್ ಮಹೇಶ್ ಕೇರಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗ್ರಾಮ ಮಟ್ಟದಿಂದ ಪ್ರತಿನಿಧಿಸುವ ಅವಕಾಶ ದೊರೆತಿರುವುದು ಒಳಮೊಗ್ರು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು, ಈ ಸಾಧನೆಗೆ ಪಕ್ಷದ ವತಿಯಿಂದ ಶುಭಾಶಯಗಳನ್ನು ತಿಳಿಸಲಾಯಿತು.

Leave a Reply

Your email address will not be published. Required fields are marked *