ಪುತ್ತೂರು:ಕಾವು ಸಮೀಪದ ಮಾಡನ್ನೂರುನಲ್ಲಿ 2015ಲ್ಲಿ ಆರಂಭಗೊಂಡ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶತಮಾನೋತ್ಸವ ಆಚರಿಸುತ್ತಿದ್ದು, ಇದರ ಅಂಗವಾಗಿ ಡಿ. 5ರಿಂದ 7ರ ತನಕ ವಿವಿಧ ಕಾರ್ಯಕ್ರಮಗಳನ್ನು
ಹಮ್ಮಿಕೋಂಡಿದ್ದು, ಮುಖ್ಯವಾಗಿ 35 ವಿದ್ಯಾರ್ಥಿಗಳಿಗೆ ಹುದವಿ ಬಿರುದು ಪ್ರದಾನ ನಡೆಯಲಿದೆ ಎಂದು ಸಮಿತಿಯ ಎಲ್.ಟಿ. ಅಬ್ದುಲ್ ರಜಾಕ್ ತಿಳಿಸಿದರು.
ಅವರು ಡಿ. 4ರಂದು ಪುತ್ತೂರುನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಿ. 5ರಂದು ಸೆಯ್ಯದ್ ಅಹ್ಮದ್ ಪೂಕೋಯ ತಂಙಳ್‍ರವರ ನೇತೃತ್ವದಲ್ಲಿ ಪಾಣಕ್ಕಾಡ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಉಪಸ್ಥಿತಿಯಲ್ಲಿ ಸಮಸ್ತದ “ನೂರು” ಧ್ವಜಗಳನ್ನು ಹಾರಿಸಿ ದಶಮಾನೋತ್ಸವ ಧ್ವಜಾರೋಹಣ ನಡೆಯಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸೆಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಸಮಸ್ತ ಕೇರಳ ಜಂಇಯ್ಯತ್ತುಲ್ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಕಾಸಿಮಿ,, ಉಸ್ತಾದ್ ಉಸ್ಮಾನ್ ಫೈಝಿ ತೋಡಾರು ಮುಖ್ಯ ಅತಿಥಿ ಭಾಗವಹಿಸಲಿದ್ದು, ಸಿಂಸಾರುಲ್ ಹಕ್ ಹುದವಿ ಅಬುಧಾಬಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.




ಡಿ. 6: ಬೆಳಿಗ್ಗೆ ಕರ್ಮಶಾಸ್ತ್ರ ಸೆಮಿನಾರ್ ನಡೆಯಲಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಯುಎಇ. ಸಮಿತಿ ಅಧ್ಯಕ್ಷ ಶರೀಫ್ ಕಾವು ಅಧ್ಯಕ್ಷತೆಯಲ್ಲಿ ಗಲ್ಫ್ ಮೀಟ್, ಸಂಜೆ ದಫ್ ಪ್ರದರ್ಶನ, ಇಶ್ಕ್ ಮಜ್ಲಿಸ್, ರಾತ್ರಿ ಮಜ್ಲಿಸುನ್ನೂರು ಆಧ್ಯಾತ್ಮಿಕ ಮಹಾ ಸಂಗಮ ನಡೆಯಲಿದ್ದು ಅಲವಿ ಫೈಝಿ ಕುಳಪ್ಪರಂಬ್ ಉದ್ಘಾಟನೆ ಮಾಡಲಿದ್ದಾರೆ. ಸೆಯ್ಯದ್ ಅಬ್ದುಲ್ ರಶೀದ್ ಅಲಿ ಶಿಹಾಬ್ ತಂಙಳ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಡಿ. 7: ಬೆಳಿಗ್ಗೆ ವಿದ್ಯಾರ್ಥಿ ಯುವಜನ ಸಮ್ಮೇಳನ ನಡೆಯಲಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಪಾಲ್ಕನ್ ಶಿಕ್ಷಣ ಸಂಸ್ಥೆಯ ಡಾ. ಸುಭಾನ್, ಮುಹಮ್ಮದ್ ಫ್ದೈಝಿ ಓನಂಬಳ್ಳಿ, ಮುಜ್ತಬಾ ಫೈಝಿ ಆನಕ್ಕರ ಪ್ರಭಾಷಕರಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ:
ಸಂಜೆ ಸಮಾರೋಪ ಸಮಾರಂಭ, ಪದವಿ ಪ್ರದಾನ ನಡೆಯಲಿದೆ. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಸೆಯ್ಯದ್ ಮುಹಮ್ಮದ್ ಜಿಫ್ರಿ ತಂಙಳ್ ಪದವಿ ಪ್ರದಾನ ಮಾಡಲಿದ್ದಾರೆ. ಪಾಣಕ್ಕಾಡ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪಾಣಕ್ಕಾಡ್ ನಾಸಿರ್ ಹಯ್ಯ್ ತಂಙಳ್, ಯಂ.ಟಿ. ಅಬ್ದುಲ್ಲ ಮುಸ್ಲಿಯಾರ್, ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ, ಯು. ಶಾಫಿ ಹಾಜಿ ಚೆಮ್ಮಾಡ್, ಸೆಯ್ಯದ್ ಜಲಾಲ್ ತಂಙಳ್ ಕುನ್ನಂಗೈ, ಝಕರಿಯಾ ಜೋಕಟ್ಟೆ, ಶರೀಫ್ ವೈಟ್ ಸ್ಟೋನ್, ಇನಾಯತ್ ಅಲಿ ಮುಲ್ಕಿ, ಏನೇಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ವೈ. ಅಬ್ದುಲ್ಲ ಕುಂಞï
ಏನೇಪೋಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ. ನಿಸಾರ್ ಅಹಮದ್, ಡಾ. ಇಫ್ತಿಕಾರ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಬುಶುರಾ ಅಬ್ದುಲ್ ಅಝೀಜ್,ಸಮಿತಿ ಸದಸ್ಯರುಗಳಾದ ಬಿ.ಎಂ. ಅಬ್ದುಲ್ಲ, ಇಸಾಕ್ ಪಡೀಲ್, ಸಿ.ಕೆ. ಮಹಮ್ಮದ್ ದಾರಿಮಿ ಉಪಸ್ಥಿತರಿದ್ದರು.



