ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಮೂವರನ್ನು ಬಂಧಿಸಿರುವ ಘಟನೆ ನ .15ರಂದು ಸಂಜೆ 5 ಗಂಟೆಯ ವೇಳೆ ಮೂಡಬಿದ್ರೆ ತಾಲೂಕು ಹೊಸ್ಮರು-ನೆಲ್ಲಿಕಾರು ಪ್ರದೇಶದಲ್ಲಿ ನಡೆದಿದೆ


ಖಚಿತ ಮಾಹಿತಿಯ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಟಾಟಾ ಏಸ್ ಕಂಟೇನರ್ ವಾಹನದಲ್ಲಿ ಮೂರು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮನ್ಸೂರ್ ಅಧ್ಯಾಪಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವತ್ ಹಾಗೂ ಅಬ್ದುಲ್ ಮೊಹಮ್ಮದ್ ನಿಶಾಂ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಮನ್ಸೂರ್ ಅಧ್ಯಾಪಡಿ @ ಮೊಹಮ್ಮದ್ ಮನ್ಸೂರ್ ವಿರುದ್ಧವೇ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ 29 ಪ್ರಕರಣಗಳು ದಾಖಲಾಗಿದ್ದು, ಇದು 30ನೇ ಪ್ರಕರಣ ಎಂದು ತಿಳಿದುಬಂದಿದೆ.
ಎರಡನೇ ಆರೋಪಿ ಮೊಹಮ್ಮದ್ ಅಶ್ವತ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಸಂಬಂಧಿತ ಒಂದು ಪ್ರಕರಣ ದಾಖಲಾಗಿದ್ದರೆ, ಮೂರನೇ ಆರೋಪಿ ನಿಶಾಂ ವಿರುದ್ಧ ಇದು ಮೊದಲ ಪ್ರಕರಣವಾಗಿದೆ.


ಈ ಬಗ್ಗೆ ಮೂಡಬಿದ್ರೆ ಅಪರಾಧ ಕ್ರಮಾಂಕ 178/2025ರಂತೆ
ಕಲಂ 111(BNS), 11(1)(D) – ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ,
ಹಾಗೂ ಕಲಂ 4, 5, 7, 12 – ಕರ್ನಾಟಕ ಜಾನುವಾರು ಹತ್ತಿಯ ಪ್ರತಿಬಂಧಕ ಮತ್ತು ಸಂರಕ್ಷಣಾ ಆದೇಶ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ಪ್ರಕರಣದಂತೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



