ವಾರಣಾಸಿ (ಉತ್ತರಪ್ರದೇಶ): ಭಾರತದ ಪ್ರಥಮ ಸ್ಥಳೀಯ ಹೈಡ್ರೋಜನ್ ಇಂಧನ ಕೋಶ ಹಡಗನ್ನು ಕೇಂದ್ರ ಬಂದರು ಸಚಿವ ಸರ್ಬಾನಂದ ಸೋನೋವಾಲ್ ಅವರು ಗುರುವಾರ ವಾರಣಾಸಿಯ ನಮೋ ಘಾಟ್‌ನಲ್ಲಿ ಭವ್ಯವಾಗಿ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇದು ಕೇವಲ ತಾಂತ್ರಿಕ ಸಾಧನೆಯಲ್ಲ, ಹಸಿರು ಇಂಧನ ಮತ್ತು ಸ್ವದೇಶಿ ಪರಿಹಾರಗಳತ್ತ ಭಾರತದ ವಿಶ್ವಾಸದ ಹೆಜ್ಜೆ,” ಎಂದರು.
ಚೀನಾ, ನಾರ್ವೆ, ನೆದರ್ಲ್ಯಾಂಡ್, ಜಪಾನ್‌ ಜೊತೆಗೆ ಹೈಡ್ರೋಜನ್ ಚಾಲಿತ ಹಡಗುಗಳನ್ನು ನಿರ್ವಹಿಸುವ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿರುವುದು ದೇಶದ ಹೆಮ್ಮೆಯ ವಿಷಯ ಎಂದು ಹೇಳಿದರು.

“ನಮ್ಮ ತಾಂತ್ರಿಕ ಸಾಮರ್ಥ್ಯಗಳು ಭವಿಷ್ಯಕ್ಕೆ ಸಿದ್ಧವಾಗಿದೆ ಎಂಬುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಿಂದ ಇದು ಸಾಧ್ಯವಾಗಿದೆ,” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸಾರಿಗೆ ರಾಜ್ಯ ಸಚಿವ ದಯಾಶಂಕರ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *