ಟೆಹ್ರಾನ್‌: ಇರಾನ್‌ ವಿರುದ್ಧ ಅಮೆರಿಕ- ಇಸ್ರೇಲ್‌ ನಡೆಸಿದ ಜಂಟಿ ವಾಯುದಾಳಿ ನಂತರ ಭುಗಿಲೆದ್ದ ಸಂಘರ್ಷದ ಕಿಚ್ಚು ಮಧ್ಯಪ್ರಾಚ್ಯದ ನಂತರ ಈಗ ಐರೋಪ್ಯ ಒಕ್ಕೂಟಕ್ಕೂ ತಾಗುವ ಭೀತಿ ಎದುರಾಗಿದೆ.

ಅಮೆರಿಕ- ಇಸ್ರೇಲ್‌ ಶನಿವಾರ ನಡೆಸಿದ ‘ಆಪರೇಷನ್‌ ಎಪಿಕ್‌ ಫ್ಯೂರಿ’ ಹೆಸರಿನ ಏರ್‌ಸ್ಟ್ರೈಕ್‌ನಲ್ಲಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಕುದಿಯುತ್ತಿರುವ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ (IRGC) ಕೊಲ್ಲಿರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳು, ರಾಯಭಾರ ಕಚೇರಿಗಳನ್ನ ಗುರಿಯಾಗಿಸಿಕೊಂಡು ಮಂಗಳವಾರವೂ ದಾಳಿ ಮುಂದುವರಿಸಿದೆ. ದೋಹಾ, ಮನಾಮ, ದುಬೈನ ಹಲವು ಇರಾನ್‌ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿದೆ.

ಶತಕೋಟಿ ಡಾಲರ್‌ ಶಸ್ತ್ರಾಸ್ತ್ರ ನಾಶ 
ಎರಡೂ ಕಡೆಯ ದಾಳಿಯಲ್ಲಿ ಶತಕೋಟಿ ಡಾಲರ್‌ (Billion Dollar) ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರಗಳು ನಾಶವಾಗಿವೆ. ಈ ಮಧ್ಯೆ ಗಲ್ಫ್‌ನಲ್ಲಿ ಅಮೆರಿಕದ ಅತಿದೊಡ್ಡ ರಾಡಾರ್‌ (US Radar) ವ್ಯವಸ್ಥೆಯನ್ನ AN/FPS-132 ನಾಶ ಪಡಿಸಿರುವುದಾಗಿ ಇರಾನ್‌ ಹೇಳಿಕೊಂಡಿದೆ. 5,000 ಕಿಮೀ ಗಳ ಟ್ರ್ಯಾಕಿಂಗ್‌ ವ್ಯಾಪ್ತಿಯನ್ನು ಹೊಂದಿದ್ದ ರಾಡಾರ್‌ ವ್ಯವಸ್ಥೆಯನ್ನ ಹೊಡೆದುರುಳಿಸಲಾಗಿದೆ ಎಂದು IRGC ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published. Required fields are marked *