ಟೆಹ್ರಾನ್: ಯುಎಇ ಬಂದರಿನಿಂದ ಹೊರಟ ಸ್ವಲ್ಪ ಸಮಯದಲ್ಲೇ ಥಾಯ್ ಧ್ವಜ ಹೊತ್ತ ಸರಕು ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯ ಬಳಿ ದಾಳಿ ನಡೆದಿದೆ.
ಸರಕು ಹಡಗಿನ ಮೇಲೆ ಬುಧವಾರ ದಾಳಿ ನಡೆದಿದೆ ಎಂದು ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ. ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದೆ. ಆದರೆ, ಮೂವರು ಇನ್ನೂ ಪತ್ತೆಯಾಗಿಲ್ಲ.






ಥಾಯ್ ಕಂಪನಿ ಪ್ರೆಷಿಯಸ್ ಶಿಪ್ಪಿಂಗ್ ಪಿಸಿಎಲ್ ಒಡೆತನದ ಬೃಹತ್ ವಾಹಕ ನೌಕೆ ಮಯೂರಿ ನರೀ, ಯುಎಇಯ ಖಲೀಫಾ ಬಂದರಿನಿಂದ ಹೊರಟು ಭಾರತದ ಕಾಂಡ್ಲಾ ಬಂದರಿಗೆ ತೆರಳುತ್ತಿತ್ತು. ಹಡಗು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವಾಗ ದಾಳಿಗೆ ಒಳಗಾಯಿತು.
ರಾಯಲ್ ಥಾಯ್ ನೌಕಾಪಡೆ ಬಿಡುಗಡೆ ಮಾಡಿದ ಛಾಯಾಚಿತ್ರಗಳು, ಹಡಗಿನ ಒಡಲು ಮತ್ತು ಮೇಲ್ಭಾಗದಿಂದ ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮುತ್ತಿರುವುದನ್ನು ತೋರಿಸಿವೆ. ಸುತ್ತಮುತ್ತಲಿನ ನೀರಿನಲ್ಲಿ ಲೈಫ್ ರಾಫ್ಟ್‌ಗಳು ಕಂಡುಬಂದಿವೆ.


