ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರಿದಿರುವ ನಡುವೆ ಇಸ್ರೇಲ್ ಸೇನೆ ಬೈರೂತ್ ನಗರದಲ್ಲಿರುವ ಹೆಜ್ಜುಲ್ಲ ಸಂಘಟನೆಯ ಕಚೇರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಲೆಬನಾನ್ ರಾಜಧಾನಿಯಾದ ಬೈರೂತ್‌ನಲ್ಲಿ ಹೆಜ್ಜುಲ್ಲ ಸಂಘಟನೆಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದ ಪರಿಣಾಮ ಹಲವು ಕಟ್ಟಡಗಳು ಹಾನಿಗೊಂಡಿವೆ ಎನ್ನಲಾಗಿದೆ. ಸಂಘಟನೆಯ ಕಚೇರಿಗಳು ಹಾಗೂ ಸಂಬಂಧಿತ ಸೌಕರ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದರ ನಡುವೆ ನಗರದ ಕ್ರಿಶ್ಚಿಯನ್ ಪ್ರದೇಶಗಳ ಮೇಲೂ ಬಾಂಬ್ ದಾಳಿ ನಡೆದಿರುವ ಬಗ್ಗೆ ವರದಿಗಳು ಬಂದಿವೆ. ಹೆಜ್ಜುಲ್ಲಾ ಸದಸ್ಯರು ಇಲ್ಲದ ಪ್ರದೇಶಗಳ ಮೇಲೂ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ನಡೆದಿರುವುದಾಗಿ ಸ್ಥಳೀಯ ಮೂಲಗಳು ಹೇಳಿವೆ.

ಈ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉದ್ವಿಗ್ನವಾಗಿರುವ ಪರಿಸ್ಥಿತಿ ಇನ್ನಷ್ಟು ಗಂಭೀರಗೊಂಡಿದ್ದು, ಇರಾನ್ , ಲೆಬನಾನ್ ಹಾಗೂ ಇಸ್ರೇಲ್ ನಡುವೆ ತೀವ್ರ ತಣಿವು ಮುಂದುವರಿದಿದೆ.

Leave a Reply

Your email address will not be published. Required fields are marked *