ಶ್ರೀಹರಿಕೋಟಾ: ಇಸ್ರೋದ ಅತ್ಯಂತ ಭಾರದ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬ್ಲೂಬರ್ಡ್-2 ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ(ಡಿ24) ಬೆಳಗ್ಗೆ 8.45ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿ ಕಕ್ಷೆಗೆ ಸೇರಿಸಲಾಗಿದೆ.
ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಬೇರ್ಪಡಿಸಿ ಕಕ್ಷೆಯಲ್ಲಿ ಇರಿಸಲಾಗಿದೆ




ಇದರೊಂದಿಗೆ, ಈ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಕಾರ್ಯಾಚರಣಾ ಹಾರಾಟವು ಇಸ್ರೋದ 101 ನೇ ಕಕ್ಷೆಯ ಯಶಸ್ಸನ್ನು ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮೂಲಕ ವಾಣಿಜ್ಯ ಕ್ರಾಂತಿಗೆ ಸಾಕ್ಷಿಯಾಗಿದೆ.


‘LVM3-M6 ಮಿಷನ್ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಅದರ ಉದ್ದೇಶಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ’ ಎಂದು ಇಸ್ರೋ ಎಕ್ಸ್ ಪೋಸ್ಟ್ ಮಾಡಿದೆ.
ಬಾಹುಬಲಿ(Bahubali LVM3) ಎಂದೇ ಖ್ಯಾತವಾ ಗಿರುವ ಎಲ್‌ಎಂವಿ3-ಎಂ6 ರಾಕೆಟ್, ಸುಮಾರು 6,100 ಕೆ.ಜಿ. ತೂಕದ ಈ ಭಾರೀ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆಗೆ ಸೇರಿಸಲಿದೆ. 2025ರ ಸಾಲಿನಲ್ಲಿ ಇಸ್ರೋ ಕೈಗೊಂಡ ಅತ್ಯಂತ ಮಹತ್ವದ ವಾಣಿಜ್ಯ ಉಡಾವಣೆಗಳಲ್ಲಿ ಇದು ಸೇರ್ಪಡೆಯಾಗಿದೆ.
ಅಮೆರಿಕದ “ಎಎಸ್‌ಟಿ ಸ್ಪೇಸ್ ಮೊಬೈಲ್’ ಎಂಬ ಖಾಸಗಿ ಸಂಸ್ಥೆಯು, ತಾನು ತಯಾರಿಸಿದ ಸ್ಮಾರ್ಟ್‌ಫೋನ್‌ಗಳನ್ನು ಉಪಗ್ರಹಗಳಿಗೆ ನೇರವಾಗಿ ಸಂಪರ್ಕಿಸುವ ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್‌ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುವ ಭಾಗವಾಗಿ ಈ ಉಪಗ್ರಹವನ್ನು ರೂಪಿಸಿದೆ. 43.5 ಮೀ. ಎತ್ತರದ 640 ಟನ್ ತೂಕದ ಬಾಹುಬಲಿ ಆವೃತ್ತಿಯ ರಾಕೆಟ್, ಚಂದ್ರಯಾನ-2, ಚಂದ್ರಯಾನ-3 ಸೇರಿ ಇಸ್ರೋದ 8 ಯೋಜನೆಗಳನ್ನು ಈವರೆಗೂ ಯಶಸ್ವಿಗೊಳಿಸಿದೆ.


