ಪುತ್ತೂರು: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಏಕತೆ ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ನಡೆಯುತ್ತಿರುವ “ಹಿಂದೂ ಸಂಗಮ” ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ನಗರ ವ್ಯಾಪ್ತಿಯ ಎಂಟು ವಸತಿಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ಪುತ್ತೂರು ಅಧ್ಯಕ್ಷ ಲಕ್ಷ್ಮಿಕಾಂತ್ ಬಿ. ಆಚಾರ್ಯ ಹಾಗೂ ಕಾರ್ಯದರ್ಶಿ ಅಶೋಕ್ ಕುಂಬ್ಲೆ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಪ್ರೇರಣೆಯಿಂದ ನಡೆಯುತ್ತಿರುವ ಈ ಕಾರ್ಯಕ್ರಮಗಳು ಸಮಾಜದಲ್ಲಿ ಪಂಚ ಪರಿವರ್ತನೆಯ ಮೂಲತತ್ವಗಳನ್ನು ಆಧರಿಸಿಕೊಂಡಿವೆ. ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆ, ಕುಟುಂಬ ಪ್ರಬೋಧನೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರಗಳಂತಹ ಮೌಲ್ಯಗಳನ್ನು ಸಮಾಜದೊಳಗೆ ಗಟ್ಟಿಗೊಳಿಸುವ ಉದ್ದೇಶದಿಂದ ಈ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಗರದ ವಿದ್ಯಾರಣ್ಯ, ಯಾಧವ, ಉಳ್ಳಾಲ್ತಿ, ಮಾಧವ, ವಿನಾಯಕ, ವಿವೇಕ, ಕೇಶವ ಹಾಗೂ ಕೃಷ್ಣನಗರ ವಸತಿಗಳಲ್ಲಿ ಜನವರಿ 25ರಿಂದ ಫೆಬ್ರವರಿ 1ರವರೆಗೆ ಜನರೇ ಸೇರಿ ನಡೆಸುವ ರೂಪದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮಗಳ ವೇಳಾಪಟ್ಟಿ:
ಜ.25: ಸಂಜೆ 3.30ರಿಂದ ಉಳ್ಳಾಲ್ತಿ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ತೆಂಕಿಲ ನರೇಂದ್ರ ಕಾಲೇಜು ಆವರಣದಲ್ಲಿ.
ಜ.26: ಸಂಜೆ 4ರಿಂದ ಕೃಷ್ಣನಗರ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ.
ಜ.26: ಸಂಜೆ 3.30ರಿಂದ ವಿವೇಕ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ನೆಹರುನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಆವರಣದಲ್ಲಿ.
ಫೆ.1: ಸಂಜೆ 5.15ಕ್ಕೆ ವಿದ್ಯಾರಣ್ಯ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ಶ್ರೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಸಭಾಭವನದಲ್ಲಿ.
ಫೆ.1: ಸಂಜೆ 4ರಿಂದ ಮಾಧವ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ.
ಫೆ.1: ಸಂಜೆ 4ರಿಂದ ವಿನಾಯಕ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ಸಭಾಭವನದಲ್ಲಿ.
ಫೆ.1: ಸಂಜೆ 4ರಿಂದ ಕೇಶವ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ಬನ್ನೂರು ಆಯೋಧ್ಯಾನಗರ ಶಿವಪಾರ್ವತಿ ಮಂದಿರದಲ್ಲಿ.
ಫೆ.1: ಸಂಜೆ 4ರಿಂದ ಯಾಧವ ವಸತಿ ವ್ಯಾಪ್ತಿಯ ಹಿಂದೂ ಸಂಗಮ – ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ.
ಪ್ರತಿ ವಸತಿಯಲ್ಲಿ ಅಲ್ಲಿನ ಆಯೋಜನಾ ಸಮಿತಿಯ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ, ಶೋಭಾಯಾತ್ರೆ, ಸಾಧಕರಿಗೆ ಸನ್ಮಾನ, ಗೋಪೂಜೆ ಹಾಗೂ ದಿಕ್ಸೂಚಿ ಭಾಷಣಗಳನ್ನು ಒಳಗೊಂಡಂತೆ ಹಿಂದೂ ಸಂಗಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಸಂಯೋಜಕ ಸಂತೋಷ್ ಬೋನಂತಾಯ, ಉಪಾಧ್ಯಕ್ಷ ಸಚ್ಚಿದಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *