ಬೆಂಗಳೂರು: ಇಲ್ಲಿನ ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ–2027ರ ಪ್ರಯುಕ್ತ ಏಪ್ರಿಲ್ 1 ರಿಂದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಆರಂಭವಾಗಲಿದೆ. ಜನಗಣತಿ ಕಾರ್ಯವನ್ನ ಸಮರ್ಪಕವಾಗಿ ಹಾಗೂ ಸಮಯೋಚಿತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್ ರಮೇಶ್ ಅವರು ತಿಳಿಸಿದರು.

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜನಗಣತಿ–2027ರ ಪ್ರಥಮ ಹಂತದಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತಾ ಕಾರ್ಯಗಳನ್ನ ವೇಗಗೊಳಿಸಲಾಗಿದ್ದು, ನಾಗರಿಕರು ತಮ್ಮ ಮನೆ ಹಾಗೂ ಕುಟುಂಬದ ಮೂಲಭೂತ ಮಾಹಿತಿಯನ್ನ ನಿಖರವಾಗಿ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು. 

Leave a Reply

Your email address will not be published. Required fields are marked *