ಕಡಬ: ಐತೂರು ಗ್ರಾಮದ ಕೊಡಿಂಕಿರಿ ನಿವಾಸಿ, ಮರ್ದಾಳ ಪರಿಸರದ ಪರಿಚಿತ ಹಿರಿಯ ಜೀಪ್ ಚಾಲಕ ಕುರವಿಲ್ಲ (ಕುಂಣ್ಣಿ ಮೋನ್) ಅವರು ಇಂದು ಬೆಳಗ್ಗೆ ಅನಾರೋಗ್ಯದಿಂದ ನಿಧನರಾದರು.
ಹಲವು ವರ್ಷಗಳಿಂದ ಮರ್ದಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀಪ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಸಾರ್ವಜನಿಕ ವಲಯದಲ್ಲಿ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ದಿನನಿತ್ಯದ ಸಂಚಾರದ ಮೂಲಕ ನೂರಾರು ಜನರೊಂದಿಗೆ ಆಪ್ತ ಒಡನಾಟ ಹೊಂದಿದ್ದ ಅವರು ವೃತ್ತಿ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು.




ಅವರ ನಿಧನಕ್ಕೆ ಸಂಗಮ ಟೂರಿಸ್ಟ್ ಚಾಲಕ ಮಾಲಕರ ಸಂಘ ಹಾಗೂ ಸ್ಥಳೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು ಎಲ್ಲರ ಒಳಿತನ್ನೇ ಬಯಸುತ್ತಿದ್ದ ಅವರು ವಾತ್ಸಲ್ಯದ ಪ್ರತಿರೂಪವಾಗಿ ಬದುಕಿದ ವ್ಯಕ್ತಿಯಾಗಿದ್ದರು.
ಅವರ ಅಗಲಿಕೆ ಕುಟುಂಬಸ್ಥರು ಹಾಗೂ ಸ್ನೇಹಿತ ಬಳಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸಲಾಗಿದೆ.




