ಪುತ್ತೂರು: 24ರಂದು ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 33ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಜ.24 ಮತ್ತು 25ರಂದು ನಡೆಯಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಕೂಟಗಳ ಪೈಕಿ ಹಲವು ಪ್ರಥಮಗಳನ್ನು ಸ್ಥಾಪಿಸಿದ ಕೂಟವೆಂಬ ಹೆಗ್ಗಳಿಕೆ ಪುತ್ತೂರು ಕಂಬಳಕ್ಕಿದ್ದು, ಈ ಬಾರಿ 200ಕ್ಕಿಂತಲೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲಿವೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 24ರಂದು ಬೆಳಗ್ಗೆ 10.32ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯ ಜೋಡುಕರೆಯಲ್ಲಿ ಕಂಬಳವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಲಿದ್ದಾರೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ರೈ ವಹಿಸಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಗೌರವ ಉಪಸ್ಥಿತಿ ಇರಲಿದ್ದಾರೆ. ರಾಜ್ಯ ಲೋಕೋಪಯೋಗಿ ಖಾತೆಯ ಸಚಿವ ಸತೀಶ್ ಜಾರಕಿಹೊಳಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ಸಿನಿಮಾ ತಾರೆಯರು, ಮಾಡೆಲ್‍ಗಳು ಕಂಬಳಕ್ಕೆ ಆಗಮಿಸಲಿದ್ದಾರೆ.

25ರಂದು ಕಂಬಳ ಮುಗಿದ ಬಳಿಕ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ. ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ ವಿ`Áಗದಲ್ಲಿ ಕಂಬಳ ನಡೆಯಲಿದೆ ಎಂದರು.

ಕೆಸರು ಗದ್ದೆ ಓಟ, ರಿಲೇ ಸ್ಪರ್ಧೆ
ಕಂಬಳದ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಪುತ್ತೂರು ಕಂಬಳದಲ್ಲಿ ಕರೆಯಲ್ಲೆ ರಾಜ್ಯ ಮಟ್ಟದ ಕೆಸರುಗದ್ದೆ ಓಟ ಸ್ಫರ್ದೆ ಏರ್ಪಡಿಸಲಾಗಿತ್ತು. ಈ ವರ್ಷ ಇದರ ಜತೆಗೆ ಮೊದಲ ಬಾರಿ ರಿಲೇ ಸ್ಪರ್ಧೆ ಏರ್ಪಡಿಸಲಾಗಿದೆ. ಕಂಬಳಕ್ಕೆ ತೊಂದರೆಯಾಗದಂತೆ ನಡೆಸಲಾಗುವುದು. ಆಹ್ವಾನಿತ 8 ತಂಡಗಳು ಭಾಗವಹಿಸಲಿವೆ ಎಂದು ಚಂದ್ರಹಾಸ ಶೆಟ್ಟಿ ಹೇಳಿದರು. ವಿಜೇತ ಕೋಣಗಳ ಮಾಲೀಕರಿಗೆ 2 ಪವನ್ ಚಿನ್ನ ಆರಂಭಿಸಿದ್ದು ಪುತ್ತೂರು ಕಂಬಳದಲ್ಲಿ. ಅಕ್ಕಿ ಮುಡಿ, ಹುರುಳಿ ನೀಡುವುದು ಕೂಡ ಪುತ್ತೂರಿನಲ್ಲೇ ಆರಂಭಿಸಲಾಗಿತ್ತು. ಕೆಸರುಗದ್ದೆ ಓಟ, ರಿಲೇ ಸ್ಪ`ರ್É ಕೂಡ ಪುತ್ತೂರು ಕಂಬಳದ ಕೊಡುಗೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು, ರೋಶನ್ ರೈ ಬನ್ನೂರು, ಸದಸ್ಯ ಶಿವಪ್ರಸಾದ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *