



ಪುತ್ತೂರು: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (K-SET) 2025ರಲ್ಲಿ ವಿದ್ಯಾಮಾತಾ ಅಕಾಡೆಮಿಯು ಅತ್ಯುತ್ತಮ ಫಲಿತಾಂಶ ಸಾಧಿಸಿ ಮತ್ತೊಮ್ಮೆ ತನ್ನ ಮೇಲುಗೈ ಸಾಧಿಸಿದೆ. ಕಳೆದ ಮೂರು ವರ್ಷಗಳಿಂದ ಆನ್ಲೈನ್ ಲೈವ್ ತರಗತಿಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿಯೇ ಗುಣಮಟ್ಟದ ತರಬೇತಿಯನ್ನು ನೀಡುತ್ತಿದ್ದ ವಿದ್ಯಾಮಾತಾ ಅಕಾಡೆಮಿ, ಕರಾವಳಿ ಭಾಗದಲ್ಲಿ ಸರ್ಕಾರಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಿಗಾಗಿ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆಯುತ್ತಿದೆ.
ಈ ಬಾರಿಯ K-SET 2025ರ ಪರೀಕ್ಷೆಯಲ್ಲಿ ವಿದ್ಯಾಮಾತಾ ಅಕಾಡೆಮಿಯ ಐದು ಮಂದಿ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.




ಅರ್ಹರಾದ ಅಭ್ಯರ್ಥಿಗಳು:
ಪ್ರಿಯಾಲತಾ ಡಿ. ಸಿಲ್ವಾ, ಪುತ್ತೂರು ಸಾಮೆತಡ್ಕ ನಿವಾಸಿ ಲ್ಯಾನ್ಸಿ ಮಸ್ಕರೇನಸ್ ಅವರ ಪತ್ನಿ, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಉಪ್ಪಿನಂಗಡಿಯಲ್ಲಿ ಅತಿಥಿ ಉಪನ್ಯಾಸಕಿ.
ಧನ್ಯಶ್ರೀ ಬಿ, ಕಡಬ ತಾಲೂಕು ಏನೆಕಲ್ಲು ಬಚ್ಚನಡ್ಕ ನಿವಾಸಿ ದಿನಕರ ಗೌಡ ಮತ್ತು ವಾರಿಜಾ ದಂಪತಿಗಳ ಪುತ್ರಿ.
ವಿದ್ಯಾಶ್ರೀ, ಬೆಂಗಳೂರು ಉತ್ತರಹಳ್ಳಿ ನಿವಾಸಿ ಪ್ರವೀಣ್ ಕುಮಾರ್ ಅವರ ಪತ್ನಿ, ಆರ್.ಎನ್.ಎಸ್ ಪಿಯು ಕಾಲೇಜ್, ಆರ್.ಆರ್.ನಗರ, ಬೆಂಗಳೂರು ಪ್ರಧಾನ ಉಪನ್ಯಾಸಕಿ.
ಪ್ರಿಯಾಂಕಾ ಕೆ.ಎಸ್, ಹಾಸನ ಜಿಲ್ಲೆಯ ನರಸೀಪುರ ತಹಶೀಲಿನ ಮಾಯಾ ಗೌಡನಹಳ್ಳಿ ನಿವಾಸಿ ಮಂಜುನಾಥ ಎಂ ವಿ ಅವರ ಪತ್ನಿ.
ಶಾಲಿನಿ ಎ.ಜೆ, ಸುಳ್ಯ ತಾಲೂಕು ಮಡಪ್ಪಾಡಿ ಪಣಿಯಾಳ ನಿವಾಸಿ ವಿಪಿನ್ ಎಂ ಅವರ ಪತ್ನಿ.



ಕೆ–ಸೆಟ್ ಅರ್ಹತೆಯ ಪ್ರಯೋಜನಗಳು:
ಕೆ–ಸೆಟ್ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯುತ್ತದೆ. ಜೊತೆಗೆ UGC–NET ಅರ್ಹತೆ ಪಡೆದರೆ ದೇಶದಾದ್ಯಂತ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಡೈಲಿ ವೇಜಸ್ ಮತ್ತು ಪಾರ್ಟ್‌ಟೈಮ್ ಹುದ್ದೆಗಳ ನೇಮಕಾತಿಯಲ್ಲಿ ಸಹ ಮೊದಲ ಆದ್ಯತೆಯನ್ನು ಪಡೆಯಬಹುದು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಹಾಗೂ ಆಡಳಿತ ಮಂಡಳಿ ಎಲ್ಲಾ ಅರ್ಹ ಅಭ್ಯರ್ಥಿಗಳನ್ನು ಅಭಿನಂದಿಸಿದೆ. ಮುಂದಿನ ತರಬೇತಿಗಾಗಿ ಆಸಕ್ತರು 9620468869 ಎಂಬ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
