ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಪ್ಪೆ ಜಕ್ಕಲ್ ನಿವಾಸಿ, ಬಹುಮುಖ ಪ್ರತಿಭೆಯ ನಾಟಿ ವೈದ್ಯ ಹಾಗೂ ಮುಟ್ಟಾಳೆ ತಯಾರಕರಾದ ಕಾಂತಪ್ಪ ಕಲ್ಲುಗುಡ್ಡೆ (65) ಅವರು ಮಾ.15ರಂದು ಸ್ವಗೃಹದಲ್ಲಿ ನಿಧನರಾದರು.







ಮೃತರು ಪತ್ನಿ ಸೇಸಮ್ಮ, ಪುತ್ರಿಯರಾದ ಪೂರ್ಣಿಮಾ, ಪುಷ್ಪ, ಭವಿತ ಹಾಗೂ ಪುತ್ರರಾದ ಪ್ರಸಾದ್ ಮತ್ತು ನಿತಿನ್ ಅವರನ್ನು ಅಗಲಿದ್ದಾರೆ.
ಬಂಧು ಬಳಗದಲ್ಲಿ ದೈವ ನರ್ತಕರಾದ ಕಿಟ್ಟು, ಕಡಬದ ಉಪತಹಶೀಲ್ದಾರ್ ಗೋಪಾಲ. ಕೆ ಶಿಕ್ಷಕರಾದ ಆನಂದ ಮತ್ತು ರಾಮಕೃಷ್ಣ (ಸಹೋದರರು) ಹಾಗೂ ಸಹೋದರಿಯರಾದ ನೀಲು, ರಾಮಕ್ಕ, ಸುಂದರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಹಾಗೂ ಶಿಷ್ಯವರ್ಗವನ್ನು ಅಗಲಿದ್ದಾರೆ.


