ಆಮಂತ್ರಣ ಪತ್ರಿಕೆ
ಆತ್ಮೀಯರೇ,
ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 04-11-2025 ರಂದು ಕಾಸರಗೋಡು ಗೋ-ಕುಟೀರದ ಭೂಮಿ ಪೂಜೆ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈಗ ಗೋ-ಕುಟೀರದ ಮೊದಲ ಹಂತದ ಕಾಮಗಾರಿಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಎರಡನೇ ಹಂತವಾಗಿ ಮೊದಲ ಅಂತಸ್ತಿನ ಗೋ ಮೇವು ಸಂಗ್ರಹಾಲಯ ಹಾಗೂ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಅಂಗವಾಗಿ ವಿಶೇಷ ಗೋ-ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.



ಈ ಕಾರ್ಯಕ್ರಮವು ದಿನಾಂಕ 24 ಮಾರ್ಚ್ 2026, ಮಂಗಳವಾರ, ಬೆಳಗ್ಗೆ 9.45 ಗಂಟೆಗೆ, ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ನಡೆಯಲಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ತಾವು ಉಪಸ್ಥಿತರಿದ್ದು, ಆಶೀರ್ವದಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಮ್ರವಾಗಿ ವಿನಂತಿಸುತ್ತೇವೆ.
ವಂದನೆಗಳೊಂದಿಗೆ,
ಶಿವರಾಮ ಕಾಸರಗೋಡು
ಅಧ್ಯಕ್ಷರು
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)
(ಕಾಸರಗೋಡು ಗೋ-ಕುಟೀರ)
ಕನ್ನಡ ಗ್ರಾಮ, ಕಾಸರಗೋಡು – 671121
ಮೊಬೈಲ್: 9448572016






