ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ ಕಾಸರಗೋಡು ಗೋ- ಕುಟೀರ’ ದ ಕಾಮಗಾರಿಯು ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿರುತ್ತದೆ.

ಕಳೆದ ನವಂಬರ್ 4 , 2025 ರಂದು ಶಿವರಾಮ ಕಾಸರಗೋಡು ಅವರ 60 ನೇ ಜನ್ಮ ವರ್ಷಾಚರಣೆಯನ್ನು ಗೋ – ಸೇವೆಯ ಮೂಲಕ ಗುರುತಿಸಿಕೊಳ್ಳುವುದಕ್ಕಾಗಿ ಕಾಸರಗೋಡು ಗೋ- ಕುಟೀರವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಇದರ ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತವಾಗಿ ಮೊದಲ ಅಂತಸ್ತಿನ ಗೋ – ಮೇವು ಸಂಗ್ರಹಣಾಲಯ ಹಾಗೂ ಮೇಲ್ಚಾವಣಿ ನಿರ್ಮಾಣ ಕಾಮಗಾರಿಗೆ ಇದೇ ಮಾರ್ಚ್ 24, 2026ರಂದು ಬೆಳಗಿನ ಶುಭ ಮುಹೂರ್ತದಲ್ಲಿ ಗೋ- ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವು ಗುರು ಹಿರಿಯರ ಆಶೀರ್ವಾದದೊಂದಿಗೆ ನಡೆಯಿತು. ಕಾಸರಗೋಡಿನ ಧಾರ್ಮಿಕ ಮುಂದಾಳು ಡಾ.ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಚಾಲನೆ ನೀಡಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಂಟ್ರಾಕ್ಟರ್ ಕಿರಣ ಕುಮಾರ್ ಬಿ .ಕೆ ,ರಾಜೇಶ್ ಕುಮಾರ್ ಕೆ.ಬೀರಂತ ಬೈಲ್, ದೀಕ್ಷಿತ್ ಆಚಾರ್ಯ, ದೀಪಕ್ ಚಂದ್ರ ಕೆ, ಪ್ರಸಾದ್ ಕೇಳು ಗುಡ್ಡೆ, ಜಗದೀಶ್ ಕೇಳು ಗುಡ್ಡೆ, ಅಶೋಕ, ಕಿಶೋರ್ ಕುಮಾರ್, ಕುಶಲಕುಮಾರ್, ರಾಧಾ ಕಾಸರಗೋಡು, ಸವಿತಾ ಕಿಶೋರ್, ಕಾವ್ಯ ಕುಶಲ,ಕೃಪಾನಿಧಿ, ಅನುಷಾ ,ಉಪಸ್ಥಿತರಿದ್ದರು.

ಕಾಸರಗೋಡು ಪ್ರದೇಶದಲ್ಲಿ ಗೋವುಗಳನ್ನು ಗೋ- ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ನೂರಾರು ಗೋ- ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪು ಗೊಳಿಸುವುದಕ್ಕಾಗಿ ಸಾರ್ವಜನಿಕರು ಹಾಗೂ ಗೋ- ಪೋಷಕರ ಸಹಕಾರ ಪ್ರೋತ್ಸಾಹ ಪ್ರಾಯೋಜಕ ತ್ವದಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಗೋ- ಕುಟೀರದ ನಿರ್ಮಾಣ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಊರಿನ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಗೋಮೂತ್ರ, ಪಂಚಗವ್ಯ ಮತ್ತುಸಗಣಿ -ಗೋಮಯವನ್ನು, ಅವಶ್ಯಕತೆ ಇರುವವರಿಗೆ ದಿನನಿತ್ಯ ದೊರಕುವಂತೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಕಾಸರಗೋಡು ಗೋ- ಕುಟೀರದ ಗೋವುಗಳನ್ನು ದತ್ತು ಪಡೆದು ಒಂದು ವರ್ಷ ಕಾಲ ಗೋ- ಗ್ರಾಸ ,ಗೋ- ಆಹಾರವನ್ನು ನೀಡಿ ಪೋಷಿಸಲು, ಗೋ ಭಕ್ತರಿಗೆ ಗೋ ಸೇವೆ ಮಾಡಲು ಅವಕಾಶ ನೀಡಲು ಉದ್ದೇಶಿಸಲಾಗಿದೆ. ಶಿವರಾಮ ಕಾಸರಗೋಡು
ಮೊಬೈಲ್: 9448572016

Leave a Reply

Your email address will not be published. Required fields are marked *