ಪುತ್ತೂರು: ದೆಹಲಿಯಲ್ಲಿ ನಡೆದ ಭಯೋತ್ಪಾದಕ ಬಾಂಬ್ ದಾಳಿ ಖಂಡಿಸಿ ಹಿಂದು ಜಾಗರಣ ವೇದಿಕೆಯಿಂದ ಪುತ್ತೂರಿನ ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ವಿದ್ಯೆಗಿಂತ ದೇಶ ಭಕ್ತಿ ಮುಖ್ಯ:
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಿಶೋರ್ ಶಿರಾಡಿ ಅವರು ಮಾತನಾಡಿ ದೆಹಲಿಯಲ್ಲಿ ನಡೆದ ಬಾಂಬ್ ದಾಳಿಗೆ ಸಂಬಂಧಿಸಿ ಭಯೋತ್ಪಾದನೆ ಖಂಡಿಸದ ಹಲವು ಮತಾಂದ ಸಂಘಟನೆಗಳು, ರಾಜಕೀಯ ಶಕ್ತಿಗಳು ನಮ್ಮೊಳಗೆ ಇದ್ದಾರೆ. ಅವರೆಲ್ಲ ದೇಶ ಭಕ್ತರಾಗಿದ್ದರೆ ಭಯೋತ್ಪಾದನೆಯನ್ನು ಖಂಡಿಸಬೇಕಾಗಿತ್ತು. ಅದರೆ ಅವರು ಯಾವುದೇ ಖಂಡನೆ ವ್ಯಕ್ತಪಡಿಸಿಲ್ಲ. ಮುಂದಿನ ದಿನ ದೇಶ ಭಕ್ತಿಯನ್ನು ಮೂಡಿಸದಿದ್ದಲ್ಲಿ ಮುಂದೊಂದು ದಿನ ಪಾಕಿಸ್ತಾನದಂತೆ ಭಾರತವೂ ಭಯೋತ್ಪಾದಕ ರಾಷ್ಟ್ರ ಆಗುವ ಸಾಧ್ಯತೆ ಇದೆ. ಆದ್ದರಿಂದ ನಾವು ಪ್ರತಿಯೊಬ್ಬ ನಾಗರಿಕರಿಗೆ ವಿದ್ಯೆಗಿಂತ ದೇಶ ಭಕ್ತಿ ಮುಖ್ಯ ಎಂದು ಎಚ್ಚರಿಸಬೇಕಾಗಿದೆ. ಶಾಲೆಗಳು ದೇಶ ಭಕ್ತಿ, ಸಂಸ್ಕಾರ ಕೊಡುವಂತಹ ಕೇಂದ್ರವಾಗಬೇಕು ಎಂದರು. ಧರ್ಮದ ಬಗ್ಗೆ ಜಾಗೃತಿ ಆಗಬೇಕಾದರೆ ಧಾರ್ಮಿಕ ಕೇಂದ್ರದಲ್ಲಿ ಒಗ್ಗೂಡಬೇಕು ಎಂದ ಅವರು ದೇಶದ ಭದ್ರತೆಯನ್ನು ಕಾಪಾಡಲು ಭಯೋತ್ಪಾದನೆಯನ್ನು ಬುಡ ಸಹಿತ ಕಿತ್ತೊಗೆಯಲು ಜಾತಿ ಮತ ಬೇದವಿಲ್ಲದೆ ದೇಶ ಭಕ್ತಿ ಎಲ್ಲರಲ್ಲೂ ಮೂಡಬೇಕೆಂದರು.

ಬ್ರಹ್ಮಕಲಶದಲ್ಲಿ ಬಂದು ದೊಡ್ಡ ದೊಡ್ಡ ಭಾಷಣ ಮಾಡುವವರಿಗೆ 50ಸಾವಿರ, 20ಸಾವಿರ ಬರೆಯುವಂತೆ ಪುತ್ತೂರಿನ ಶಾಸಕರು ಹೇಳುತ್ತಾರೆ. ಆದರೆ ದೇಶದ ಭದ್ರತೆಗೆ ಸೈನಿಕರಿದ್ದಾರೆ. ದೇಶದ ಆಂತರಿಕವಾಗಿ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿವಾರದ ಕಾರ್ಯಕರ್ತರು ತನ್ನ ತನುಮನವನ್ನು ಎಲ್ಲವನ್ನು ತ್ಯಜಿಸಿ ಸೇವೆ ಮಾಡುತ್ತಿರುವುದನ್ನು ನೋಡಿದ್ದೇವೆ. ಆದ್ದರಿಂದ ಬ್ರಹ್ಮಕಲಶಕ್ಕೆ ಎಷ್ಟು ಹಣಕೊಟ್ಟರು ಅದು ಅಲ್ಲಿ ದೇವಸ್ಥಾನದ ಕಟ್ಟಡ ನಿರ್ಮಾಣ ಆಗಬಹುದು ಅಥವಾ ಆದ್ಯಾತ್ಮಿಕ ಕ್ಷೇತ್ರವಾಗಿ ಕಾಣಿಸಬಹುದು ಹೊರತು ಅನ್ಯಮತೀಯರಿಂದ ಭದ್ರತೆ, ನಂಬಿಕೆ, ಶ್ರದ್ಧಾಕೇಂದ್ರ ಉಳಿಸುವ ಕೆಲಸಕ್ಕಾಗಿ ಭಾಷಣದ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಕಿಶೋರ್ ಶಿರಾಡಿ ಹೇಳಿದರು.

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು,ಹಿಂಜಾವೇ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅನೂಪ್ ಆಳ್ವ ಎಣ್ಮೂರು,ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ್ ದಯಾನಂದ ಅಂಬುಲ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ದಿನೇಶ್ ಪಂಜಿಗ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಮೋಹನ್‍ದಾಸ್ ಕಾಣಿಯೂರು, ಜಿಲ್ಲಾ ಸಹ ಸಂಯೋಜಕ ಭರತ್ ಈಶ್ವರಮಂಗಲ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶಿವಪ್ರಸಾದ್ ಶಾಂತಿಗೋಡು, ಪ್ರಸಾದ್ ಪುರುಷರಕಟ್ಟೆ, ತಾಲೂಕು ಸಂಯೋಜಕ ಕೀರ್ತನ್ ಸವಣೂರು, ಸಹ ಸಂಯೋಜಕ ಸುಭಾಶ್ ಮುಕ್ವೆ, ಸಂತೋಷ್ ಮುಂಡೂರು, ಸಂದೀಪ್ ಮುಂಡೂರು, ನಗರ ಸಂಯೋಜಕ ಮನೀಶ್ ಬಿರ್ವ, ಸಹ ಸಂಯೋಜಕ ಕಿರಣ್ ಬೆದ್ರಾಳ, ತಾಲೂಕು ಕಾರ್ಯಕಾರಣಿ ಸದಸ್ಯರಾದ ಶೇಖರ್ ಬನ್ನೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಸನ್ನ ದರ್ಬೆ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಶ್ರೀಧರ್ ತೆಂಕಿಲ, ಜಗದೀಶ್ ಬನ್ನೂರು, ಸಂಜಯ್, ಹರಿಪ್ರಸಾದ್, ಹರೀಶ್ ದೋಳ್ಪಾಡಿ, ಸತೀಶ್ ನಾೈಕ್ ಪರ್ಲಡ್ಕ, ಬಿಜೆಪ ಜಿಲ್ಲಾ ಪ್ರಶೀಕ್ಷಣ ಪ್ರಕೋಷ್ಠದ ಸಂಚಾಲಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಯುವ ಮೋಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಮಚ್ಚಿಮಲೆ, ಲಕ್ಷ್ಮಣ ಬೆಳ್ಳಿಪ್ಪಾಡಿ, ವಸಂತಲಕ್ಷ್ಮೀ, ವಿಶ್ವನಾಥ ಗೌಡ ಬನ್ನೂರು, ಭಾಮಿ ಜಗದೀಶ್ ಶೆಣೈ, ಪ್ರಕಾಶ್ ಕೈಂದಾಡಿ, ರಾಧಾಕೃಷ್ಣ ನಂದಿಲ, ಕಿರಣ್ ಬಲ್ನಾಡು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಸುರೇಶ್ಚಂದ್ರ ರೈ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *