ಪುತ್ತೂರು: ಮಂಗಳೂರು, ಜ.22: ಪುತ್ತೂರಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರೀತಿಸಿ ಮಗುವಾದ ಬಳಿಕ ಮದುವೆಯಾಗಲು ನಿರಾಕರಿಸಿರುವ ಪ್ರಕರಣದಲ್ಲಿ ಸಂಧಾನಕ್ಕೆ ಯುವಕನ ಮನೆಯವರನ್ನು ಒಪ್ಪಿಸಲು ಸಂಧಾನಕ್ಕೆ ಮುಂದಾರುವ ಹಿನ್ನೆಲೆಯಲ್ಲಿ ಜ.24ರಂದು ನಿಗದಿಯಾಗಿದ್ದ ಮಗುವಿನ ನಾಮಕರಣವನ್ನು ಸದ್ಯ ಕೈಬಿಡಲಾಗಿದೆ. ಜನವರಿ 31ರೊಳಗೆ ಮದುವೆ ನಡೆಯದಿದ್ದರೆ ಫೆಬ್ರವರಿ 7ರಂದು ನಾಮಕರಣ ನಡೆಯಲಿದ್ದು, ನಂತರ ಯಾವುದೇ ಸಂಧಾನ ಇಲ್ಲ ಎಂದು ಹಿಂದುಳಿದ ವರ್ಗಗಳ ಅಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.


ನಡೆಸಿ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಜನವರಿ 24ರಂದು ಕಲ್ಲಡ್ಕದಲ್ಲಿ ಮಗುವಿಗೆ ನಾಮಕರಣಕ್ಕೆ ದಿನ ನಿಗದಿಪಡಿಸಲಾಗಿತ್ತು. ಆದರೆ ಸಂತ್ರಸ್ಥೆಯ ತಾಯಿ ನಮಿತಾ ಅವರಿಗೆ ಆಚಾರ್ಯ ಸಮುದಾಯದ ಉಡುಪಿ ಒಕ್ಕೂಟದ ಪದಾಧಿಕಾರಿ ಮಧು ಆಚಾರ್ಯ ಎಂಬವರು ಕರೆ ಮಾಡಿ, ಕೃಷ್ಣ ಜೆ.ರಾವ್ ಅವರ ಕುಟುಂಬ ಮದುವೆ ಮಾಡಿಸಲು ಒಪ್ಪಿರುವುದಾಗಿ ತಿಳಿಸಿ, ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ತೊಟ್ಟಿಲು ಹಾಕುವ ಕಾರ್ಯಕ್ರಮ ಬೇಡ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿ ನಾಮಕರಣದ ದಿನಾಂಕವನ್ನು ಬದಲಾಯಿಸಲಾಗಿದೆ. ಹಿಂದೆಯೂ 6ತಿಂಗಳು ನಮ್ಮನ್ನು ದಾರಿ ತಪ್ಪಿಸಲಾಗಿದ್ದು ಈ ಬಾರಿ ಹಾಗಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.



ಸಂಧಾನಕ್ಕೆ ನಮಿತಾ ಮತ್ತು ಆಕೆಯ ಮಗಳು ಮಾತ್ರ ಬರಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ, ಇದನ್ನು ಯಾರೂ ಒಪ್ಪುವುದಿಲ್ಲ. ಆದರೂ ಸಂಧಾನಕ್ಕೆ ನಾನು ಹಾಗೂ ನಂಜುಂಡಿ ಹೋಗುವುದಿಲ್ಲ. ಸಂಧಾನ ಪುತ್ತೂರು ಪೊಲೀಸ್ ಠಾಣೆಯಲ್ಲೇ ಆಗಲಿ ಅಥವಾ ಮಂಗಳೂರು ಎಸ್‌ಪಿ ಅವರ ಬಳಿ ನಡೆಯಲಿ ಎಂದು ಪ್ರತಿಭಾ ಬೇಡಿಕೆ ಮುಂದಿಟ್ಟಿದ್ದಾರೆ.
ಕೃಷ್ಣ ಜೆ.ರಾವ್ ಕುಟುಂಬ ಮದುವೆಗೆ ಒಪ್ಪುವುದಿಲ್ಲ ಎಂದು ಪುತ್ತೂರು ಶಾಸಕರೂ ಹೇಳಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು ಕೇಸಿನಿಂದ ಹೊರಬರಲು ನಾಟಕ ನಡೆಯುತ್ತಿರುವ ಶಂಕೆ ಇದೆ. ಹಿಂದೆಯೂ ಮಗುವನ್ನು ಆಶ್ರಮಕ್ಕೆ ನೀಡಬೇಕು, ಕೇಸು ಹಿಂದಕ್ಕೆ ಪಡೆಯಬೇಕು, ಮದುವೆಯ ನಂತರ ವಿಚ್ಛೇದನ ಪಡೆಯುವಂತೆ ಬೇಡಿಕೆ ಇಟ್ಟಿದ್ದರು. ಮದುವೆ ಕಾನೂನುಬದ್ಧವಾಗಿ ಆನ್ ಲೈನ್ ಮೂಲಕ ಮಾಡಿಸುವ ಯೋಚನೆ ಅವರಲ್ಲಿದೆ. ಯಾವುದೇ ರೀತಿಯಲ್ಲಾದರೂ ಮದುವೆ ಆಗಲಿ ಈ ಪ್ರಕರಣ ಅಂತ್ಯವಾಗಬೇಕು, ಇಬ್ಬರ ತಪ್ಪಿಗೂ ಪ್ರಾಯಶ್ಚಿತವಾಗಬೇಕು.
ಯಾವುದೇ ಗೋಷ್ಠಿ ಅಥವಾ ಸಭೆಗಳಿಗೆ ಹೋಗಬಾರದೆಂದು ಷರತ್ತು ವಿಧಿಸಿದ್ದರಿಂದ ಸುದ್ದಿಗೋಷ್ಠಿಗೆ ನಮಿತಾ ಬಂದಿಲ್ಲ. ಜನವರಿ 31ರೊಳಗೆ ಮದುವೆ ಆಗದಿದ್ದರೆ ಮುಂದೆ ಯಾವುದೇ ಸಂಧಾನವೇ ಅವಕಾಶ ಇಲ್ಲ. ಫೆ.7ರಂದು ಅದ್ಧೂರಿಯಾಗಿ ಮಗುವಿನ ನಾಮಕರಣ ಕಲ್ಲಡ್ಕದಲ್ಲಿ ನಡೆಯಲಿದೆ ಎಂದು ಹೇಳಿದರು.




