ಸುಬ್ರಹ್ಮಣ್ಯ, ಜ.22:
ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನಾ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 2025ರ ನವೆಂಬರ್ ಮತ್ತು ಡಿಸೆಂಬರ್ ಎಂಬ ಎರಡು ತಿಂಗಳ ಅವಧಿಯಲ್ಲಿ ಒಟ್ಟು ₹14 ಕೋಟಿ 77 ಲಕ್ಷ 80 ಸಾವಿರ ಆದಾಯವನ್ನು ಗಳಿಸಿದೆ.





ನವೆಂಬರ್ ತಿಂಗಳಲ್ಲಿ ದೇವಸ್ಥಾನದ ವಿವಿಧ ಸೇವೆಗಳಿಂದ ₹4 ಕೋಟಿ 56 ಲಕ್ಷ 21 ಸಾವಿರ 739, ಹುಂಡಿಯಿಂದ ₹1 ಕೋಟಿ 9 ಲಕ್ಷ 76 ಸಾವಿರ 957 ಹಾಗೂ ಅನ್ನದಾನ ನಿಧಿಯಿಂದ ₹83 ಲಕ್ಷ 57 ಸಾವಿರ 769 ಆದಾಯ ಲಭಿಸಿದೆ.
ಡಿಸೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ ₹5 ಕೋಟಿ 30 ಲಕ್ಷ 18 ಸಾವಿರ 923, ಹುಂಡಿಯಿಂದ ₹1 ಕೋಟಿ 90 ಲಕ್ಷ 63 ಸಾವಿರ 518 ಹಾಗೂ ಅನ್ನದಾನ ನಿಧಿಯಿಂದ ₹1 ಕೋಟಿ 7 ಲಕ್ಷ 41 ಸಾವಿರ 594 ಆದಾಯ ಸಂಗ್ರಹವಾಗಿದೆ.


ಇದನ್ನು ಹೊರತುಪಡಿಸಿ ದೇವಸ್ಥಾನದ ವಸತಿಗೃಹಗಳು ಮತ್ತು ಇತರ ಮೂಲಗಳಿಂದಲೂ ಹೆಚ್ಚುವರಿ ಆದಾಯ ಬಂದಿರುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅವರು ಮಾಹಿತಿ ನೀಡಿದ್ದಾರೆ.
ಭಕ್ತರ ನಿರಂತರ ಆಗಮನ, ವಿಶೇಷ ಪೂಜೆ–ಸೇವೆಗಳು ಹಾಗೂ ಅನ್ನದಾನ ಯೋಜನೆಯು ದೇವಸ್ಥಾನದ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ.


