ಪುತ್ತೂರು:ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ವೈಭವದ ಕುರಿಂದು ಉತ್ಸವ ನ.5ರಂದು ರಾತ್ರಿ ದರ್ಬೆ ವೃತ್ತದಲ್ಲಿ ನಡೆಯಿತು.

ಅದರ ಮೊದಲು ದೇವಳದಲ್ಲಿ ಕಟ್ಟೆಪೂಜೆ, ಮಹಾಪೂಜೆ ನಡೆದು ದೇವರು ಹೊರಗಡೆ ಬಂದು ದೇವರ ಕಟ್ಟೆಗೆ ಬಂದು ಬಳಿಕ 2ಗಂಟೆಗಳ ತಾಸು ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು.ಬಳಿಕ ಕಟ್ಟೆಪೂಜೆ ನಡೆಯಿತು.

ಬಳಿಕ ದೇವಳದಿಂದ ದರ್ಬೆಯ ತನಕ ಪೇಟೆ ಸವಾರಿ ಉತ್ಸವ ನಡೆಯಿತು.ರಾತ್ರಿ ದೀಪ ನಮಸ್ಕಾರ, ರಾತ್ರಿ ಪೂಜೆ, ಶ್ರೀ ದೇವರ ಪೇಟೆ ಸವಾರಿ ಉತ್ಸವ ನಡೆಯಿತು.ಬಳಿಕ ದರ್ಬೆ ವೃತ್ತದಲ್ಲಿ ಶ್ರೀ ದೇವರಿಗೆ ಕುರಿಂದು ಉತ್ಸವ ಜರುಗಿತು

ಮುಂಜಾನೆ 6ಗಂಟೆಗೆ ದೇವಸ್ಥಾನಕ್ಕೆ ದೇವರು ಆಗಮನವಾಯಿತು.

Leave a Reply

Your email address will not be published. Required fields are marked *