ಕಾರವಾರ: ವಾಲಿಬಾಲ್ ಫೆಡರೇಶನ್ ಒಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆ ಪ್ರಕಾರ ಮಾರ್ಚ್ 09ರಿಂದ 12, 2026ರವರೆಗೆ ಪುದುಚೆರಿ ಯಲ್ಲಿ 23ನೇ ಹಿರಿಯ ರಾಷ್ಟ್ರೀಯ ಪುರುಷ ಮತ್ತು ಮಹಿಳಾ ಬೀಚ್ ವಾಲಿಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ.

ಈ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯದ ಹಿರಿಯ ಪುರುಷರ ಎರಡು ತಂಡಗಳು ಹಾಗೂ ಹಿರಿಯ ಮಹಿಳೆಯರ ಎರಡು ತಂಡಗಳು ಭಾಗವಹಿಸಲಿವೆ. ಇದಕ್ಕಾಗಿ ಆಯ್ಕೆ ಪ್ರಕ್ರಿಯೆ ಮಾರ್ಚ್ 04, 2026ರಂದು ಬೆಳಿಗ್ಗೆ 09:00ಕ್ಕೆ ಉಬ್ಬನಗೇರಿ, ಕಾಗಲ್ (ಕುಮಟಾ ತಾಲೂಕು) ಕಾರವಾರ ಜಿಲ್ಲೆಯಲ್ಲಿ ನಡೆಯಲಿದೆ.

ಆಯ್ಕೆ ಟ್ರಯಲ್ಸ್‌ನ್ನು ಕರ್ನಾಟಕ ಸ್ಟೇಟ್ ವಾಲಿಬಾಲ್ ಅಸೋಸಿಯೇಷನ್ ನ ಅಧಿಕೃತ ಆಯ್ಕೆ ಸಮಿತಿ ನಡೆಸಲಿದೆ. ಸಮಿತಿಯ ನಿರ್ಧಾರ ಅಂತಿಮ ಮತ್ತು ಬದ್ಧವಾಗಿರುತ್ತದೆ ಎಂದು ತಿಳಿಸಲಾಗಿದೆ.
ಭಾಗವಹಿಸುವ ಆಟಗಾರರು ತಮ್ಮ ಮೂಲ ಆಧಾರ್ ಕಾರ್ಡ್, ಫೋಟೋ ಹಾಗೂ ಬೀಚ್ ವಾಲಿಬಾಲ್ ಆಟದ ಕಿಟ್‌ ಸಹಿತ ಹಾಜರಾಗಬೇಕು. ಅಗತ್ಯ ದಾಖಲೆಗಳನ್ನು ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಹರ್ಷ ಆರ್ ಹಾಗೂ ಪ್ರಧಾನ ಕಾರ್ಯದರ್ಶಿ ಆಂಥೋನಿ ಜೋಸೆಫ್ ಅವರಿಗೆ ಒಪ್ಪಿಸಬೇಕು.
ಆಯ್ಕೆಯಾದ ಆಟಗಾರರಿಗೆ ನುರಿತ ಕೋಚ್ ಮೂಲಕ ಕೆಲವು ದಿನಗಳ ವಿಶೇಷ ತರಬೇತಿ ನೀಡಲಾಗುವುದು ಎಂದು ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಾಲ್ಮರ ಶರೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರ್ಷ ಆರ್
ಅಧ್ಯಕ್ಷರು
ಕರ್ನಾಟಕ ವಾಲಿಬಾಲ್ ಎಸೋಸಿಯೇಷನ್

ಆಂಥೋನಿ ಜೋಸೆಫ್
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್

ಸಾಲ್ಮರ ಶರೀಫ್
ಕಾರ್ಯಕಾರಿ ಸದಸ್ಯ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್

ಹೆಚ್ಚಿನ ಮಾಹಿತಿಗಾಗಿ ಶ್ರೀ ಗೌರಿ ಶೆಟ್ಟಿ (ಮೊ. 9663802704) ಅವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *