ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಹಾಗೂ ಸಜಾ ಬಂದಿಗಳು ಇದ್ದ ವಿವಿಧ ಬ್ಯಾರಕ್‌ಗಳಲ್ಲಿ ಜೈಲು ಸಿಬ್ಬಂದಿ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಆರು ಹಂತಗಳಲ್ಲಿ ನಡೆದ ಈ ಪರಿಶೀಲನಾ ಕ್ರಮದಲ್ಲಿ ಜೈಲು ಸಿಬ್ಬಂದಿ ಹಲವು ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. 67 ಮೊಬೈಲ್‌ ಫೋನ್‌ಗಳು, 14 ಚಾರ್ಜರ್‌ಗಳು, 48 ಸಿಮ್‌ ಕಾರ್ಡ್‌ಗಳು, 10 ಇಯರ್‌ಫೋನ್‌ಗಳು, ₹64,000 ನಗದು, 13 ಆಯುಧಗಳು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅನಧಿಕೃತ ವಸ್ತುಗಳ ಪತ್ತೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಪೊಲೀಸ್ ಠಾಣೆಯಲ್ಲಿ 6 FIR‌ಗಳನ್ನು ದಾಖಲಾಗಿವೆ.

ಜೈಲಿನ ಒಳಗಿನ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *