ಬುಕಿಂಗ್ ಆ್ಯಪ್: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆ ಕೊರತೆಯಿರುವುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಎಲ್ಪಿಜಿ ಬುಕ್ಕಿಂಗ್ ಮಾಡಲು ಜನರು ಮುಗಿಬಿದ್ದಿರುವುದು ಸ್ಪಷ್ಟವಾಗಿದೆ. ಇದರ ಪರಿಣಾಮವಾಗಿ Indian Oil Corporation ಸಂಸ್ಥೆಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ Indian Oil One ಗೂಗಲ್ ಪ್ಲೇ ಸ್ಟೋರ್ನಲ್ಲಿ ಅತಿ ಹೆಚ್ಚು ಡೌನ್ಲೋಡ್ ಆಗಿರುವ ಆ್ಯಪ್ ಆಗಿ ಮೊದಲ ಸ್ಥಾನಕ್ಕೇರಿದೆ. ಜನಪ್ರಿಯ ಆ್ಯಪ್ಗಳಾದ ChatGPT ಸೇರಿದಂತೆ ಹಲವು ಆ್ಯಪ್ಗಳನ್ನು ಇದು ಹಿಂದಿಕ್ಕಿದೆ.
‘ಒನ್’ ಆ್ಯಪ್ನಲ್ಲಿ ಲಭ್ಯ ಸೌಲಭ್ಯಗಳು




- ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್
- ಹೊಸ ಎಲ್ಪಿಜಿ ಸಂಪರ್ಕಕ್ಕೆ ಅರ್ಜಿ
- ಗ್ಯಾಸ್ ಏಜೆನ್ಸಿ ಬದಲಾವಣೆ
- ಸಂಪರ್ಕ ವಿವರಗಳ ನವೀಕರಣ
ತಾಂತ್ರಿಕ ಸಮಸ್ಯೆಗಳು ವರದಿ
ಸಾಮಾಜಿಕ ಜಾಲತಾಣ X ನಲ್ಲಿ ಬಳಕೆದಾರರೊಬ್ಬರು ಈ ಆ್ಯಪ್ ಟಾಪ್ ಚಾರ್ಟ್ನಲ್ಲಿ ಮೊದಲ ಸ್ಥಾನಕ್ಕೇರಿರುವುದನ್ನು ಗಮನಿಸಿ ಪೋಸ್ಟ್ ಮಾಡಿದ್ದಾರೆ. ಆದರೆ, ಅತಿಯಾದ ಡೌನ್ಲೋಡ್ಗಳಿಂದಾಗಿ ಆ್ಯಪ್ನಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಹೊಸದಾಗಿ ನೋಂದಣಿ ಮಾಡಲು ಮತ್ತು ಕೆಲವು ಫೀಚರ್ಗಳನ್ನು ಬಳಸಲು ತೊಂದರೆ ಉಂಟಾಗುತ್ತಿದೆ ಎಂದು ಬಳಕೆದಾರರು ದೂರಿದ್ದಾರೆ.
ಆ್ಯಪ್ ಬಳಸುವುದು ಕಡ್ಡಾಯವಲ್ಲ
ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಮಾಡಲು ‘ಒನ್’ ಆ್ಯಪ್ ಬಳಸುವುದು ಕಡ್ಡಾಯವಲ್ಲ. ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿಯ ಅಧಿಕೃತ ದೂರವಾಣಿ ಸಂಖ್ಯೆಯ ಮೂಲಕವೂ ಬುಕ್ಕಿಂಗ್ ಮಾಡಬಹುದು. ಹಿಂದಿನಂತೆ 1–3 ದಿನಗಳಲ್ಲಿ ಸಿಲಿಂಡರ್ ಪೂರೈಕೆ ಆಗುತ್ತಿದ್ದರೂ, ಈಗ ಬೇಡಿಕೆ ಹೆಚ್ಚಳದಿಂದ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ.





