ಕಡಬ:
ಸರಸ್ವತಿ ವಿದ್ಯಾಲಯ ಪ್ರಾಥಮಿಕ ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದ ಅಂಗವಾಗಿ ಶಿಕ್ಷಕಿ ಪ್ರೇಮಲತಾ ಮಾತಾಜಿ ಅವರು ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ, ಪುರಾಣ ಕಥೆಗಳು ಹಾಗೂ ಅದರ ವೈಜ್ಞಾನಿಕ ಮಹತ್ವವನ್ನು ಮಕ್ಕಳಿಗೆ ಸರಳ ಮತ್ತು ಸುಗಮ ಭಾಷೆಯಲ್ಲಿ ವಿವರಿಸಿದರು. ಅವರ ಮಾತುಗಳು ಮಕ್ಕಳಲ್ಲಿ ಹಬ್ಬದ ಮಹತ್ವದ ಅರಿವನ್ನು ಮೂಡಿಸಿದವು.

ವೇದಿಕೆಯಲ್ಲಿ ಶಾಲೆಯ ಮುಖ್ಯ ಗುರು ಮಾಧವ ಶ್ರೀಮಾನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉತ್ಸವದ ಅಂತ್ಯದಲ್ಲಿ ಮಕ್ಕಳಿಗೆ ಎಳ್ಳು–ಬೆಲ್ಲ ಹಂಚುವ ಮೂಲಕ ಸಂಕ್ರಾಂತಿ ಹಬ್ಬದ ಸಾಂಪ್ರದಾಯಿಕ ಸಂಭ್ರಮವನ್ನು ಮತ್ತಷ್ಟು ವರ್ಧಿಸಲಾಯಿತು.

Leave a Reply

Your email address will not be published. Required fields are marked *