ರಸ್ತೆಯಲ್ಲಿ ಬಿದ್ದು ಸಿಕ್ಕ ಪರ್ಸ್ ನ್ನು ಅದರ ನಿಜ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಅಬ್ದುಲ್ ಗಫೂರ್ ರವರು ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ.




ಕುಂಬಾರ್ಚೋಡು ಪೈಚಾರ್ ಸಮೀಪದ ರಸ್ತೆಯಲ್ಲಿ ಬಿದ್ದು ಸಿಕ್ಕ ಪರ್ಸ್ ಗಮನಿಸಿದ ಅಬ್ದುಲ್ ಗಫೂರ್ ಅವರು, ಅದರ ಮಾಲೀಕರನ್ನು ಹುಡುಕಿ ಪರ್ಸನ್ನು ಹಿಂತಿರುಗಿಸಲು ಮುಂದಾದರು. ಪರಿಶೀಲನೆಯ ವೇಳೆ ಪಸವು ಸಮೀಪದ ಸೇಫ್ವಾನ್ ಪೈಚಾರ್ ಸೇರಿದ ಪರ್ಸ್ ಆಗಿರುವುದು ತಿಳಿದುಬಂದಿತು.
ನಂತರ ಅವರು ಪರ್ಸ್ ಸುರಕ್ಷಿತವಾಗಿ ಸ್ಥಳೀಯ ಪಶು ಸಂರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅದರ ಮಾಲೀಕರಿಗೆ ಹಸ್ತಾಂತರಿಸಿದರು.



ಅಬ್ದುಲ್ ಗಫೂರ್ ಅವರ ಈ ಮಾನವೀಯ ಹಾಗೂ ಪ್ರಾಮಾಣಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


