ಮಂಗಳೂರು: ಬೈಕ್ನಲ್ಲಿ ಚಾಕುಗಳನ್ನು ಹಿಡಿದು ಸಂಚರಿಸುತ್ತಿದ್ದ ನಾಲ್ವರನ್ನು ಗಮನಿಸಿ ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ ಯುವಕನಿಗೆ ಹಲ್ಲೆ ನಡೆಸಿದ ಘಟನೆ ಬಜ್ಪೆ ಬಲಿಯಲ್ಲಿ ನಡೆದಿದೆ. ಅಖಿಲೇಶ್ ಎಂಬ ಯುವಕ ವಿಡಿಯೋ ರೆಕಾರ್ಡ್ ಮಾಡಲು ಹಿಂಬಾಲಿಸಿದಾಗ ಆರೋಪಿಗಳಲ್ಲಿ ಒಬ್ಬರು ಚಾಕುವಿನಿಂದ ಇರಿತ ನಡೆಸಿದ್ದು, ಅಖಿಲೇಶ್ ಅವರ ಕೈಗೆ ಗಾಯವಾಗಿದೆ.
ಘಟನೆ ಬಳಿಕ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಓರ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ ಆರೋಪಿಗಳನ್ನು ಸಹ ಗುರುತಿಸಲಾಗಿದ್ದು, ಅವರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.




ಘಟನೆಗೆ ಮುನ್ನ ಆರೋಪಿಗಳಾದ ನಾಲ್ವರು ಬಾರ್ನಿಂದ ಹೊರ ಬರುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದ್ದು, ಅವರು ಮದ್ಯದ ಪ್ರಭಾವದಲ್ಲಿದ್ದಾರೆಯೇ ಅಥವಾ ಮತ್ತೇನಾದರೂ ಮಾದಕ ವಸ್ತುಗಳ ಪ್ರಭಾವದಲ್ಲಿದ್ದಾರೆಯೋ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ವೈಯುಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಗಂಭೀರತೆಯಿಂದ ವಿಚಾರಣೆಯಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.



