ಮಂಗಳೂರು: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಖ್ಯಾತ ರಿಯಾಲಿಟಿ ಶೋ ಮಹಾನಟಿ ಸೀಸನ್ ಎರಡರ ವಿಜೇತೆಯಾಗಿ ಮಂಗಳೂರಿನ ವಂಶಿ ಹೊರ ಹೊಮ್ಮಿದ್ದಾರೆ.
ಸೀಸನ್ ಆರಂಭವಾದಗಿನಿಂದಲೂ ನಟನಾ ಚಾತುರ್ಯ ಮೆರೆಯುತ್ತಿದ್ದ ವಂಶಿ ಚಿನ್ನದ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದರು.ಅಂತಿಮವಾಗಿ ಮಂಗಳೂರಿನ ವಂಶಿ ಗೆದ್ದಿದ್ದಾರೆ

ವೈಟ್ ಗೋಲ್ಡ್ ವತಿಯಿಂದ ಅವರಿಗೆ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಲಭಿಸಿದೆ. ಮಹಾನಟಿ ಸೀಸನ್ ಎರಡರ ಮೊದಲ ರನ್ನರ್ ಅಪ್ ಆಗಿ ಬೆಳಗಾವಿಯ ವರ್ಷಾ ಡಿಗ್ರಜೆ ಹೊರಹೊಮ್ಮಿದ್ದಾರೆ. ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಸಿಕ್ಕಿದೆ. ಮೈಸೂರಿನ ಶ್ರೀಯ ಅಗಮ್ಯ ಮಹಾನಟಿ ಸೀಸನ್ ಎರಡರ ಎರಡನೇ ರನ್ನರ್‌ಅಪ್ ಆಗಿದ್ದಾರೆ.


