ಪುತ್ತೂರು: ಕೆಮ್ಮಿಂಜೆ ಗ್ರಾಮದಲ್ಲಿರುವ ಮುಕ್ರಂಪಾಡಿ ಕಮ್ಮಾಡಿ ಪ್ರದೇಶದ ಬಾಡಿಗೆ ಕೋಣೆಯಲ್ಲಿ ನಿಷೇಧಿತ ಮದ್ದಾದ MDMA ಮಾರಾಟಕ್ಕೆ ಯತ್ನಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ 15.11.2025ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




ಅಕ್ರಮ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ನಿಖರ ಮಾಹಿತಿ ದೊರಕಿದ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಜನಾರ್ಧನ ಕೆ.ಎಂ. ಅವರ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿತು. ಪರಿಶೀಲನೆಯ ವೇಳೆ, ಬಾಡಿಗೆ ಕೋಣೆಯಲ್ಲಿ ಆರೋಪಿ ಮಹಮ್ಮದ್ ಮುಸ್ತಫ (36), ಪುತ್ತೂರು ಕಬಕ್ಕ ನಿವಾಸಿ, ತನ್ನ ಬಳಿ 14 ಗ್ರಾಂ MDMA ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದರು.
ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 109/2025, ಕಲಂ 8(C), 22(b) NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



