ಕುಂದಾಪುರ : ಭಾರತೀಯ ಜನತಾ ಪಾರ್ಟಿ ಕುಂದಾಪುರದ ಕಾರ್ಯಾಲಯದಲ್ಲಿ ಪ್ರಶಿಕ್ಷಣ ಪೂರ್ವಭಾವಿಯ ಸಭೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಪಕ್ಷದಲ್ಲಿ ವ್ಯಕ್ತಿ ನಿರ್ಮಾಣದಿಂದ ಸಂಘಟನೆ ನಿರ್ಮಾಣ ನಡೆಸಲಾಗುತ್ತಿದೆ. ಸಂಘಟನೆಯಿಂದ ಪ್ರಶಿಕ್ಷಣದ ಮುಖ್ಯ ಗುರಿ ಕಾರ್ಯಕರ್ತನಲ್ಲಿ ವೈಚಾರಿಕ ಬದ್ಧತೆ ಬೆಳೆಸುವುದು ಪಕ್ಷದ ಕಾರ್ಯವೈಖರಿ ತಿಳಿಸುವ ನಿಟ್ಟಿನಲ್ಲಿ ಪ್ರಶಿಕ್ಷಣ ಎಂದು ಪೂರ್ವಭಾವಿ ಸಭೆಯಲ್ಲಿ ಶಾಸಕರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿದರು.
ಪ್ರಶಿಕ್ಷಣದ ಕುಂದಾಪುರದ ಸಂಚಾಲಕ ಶಂಕರ್ ಅಂಕದಕಟ್ಟೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಜಿಲ್ಲೆಯ ಪ್ರಥಮ ಕಾರ್ಯಕ್ರಮವಾಗಿದ್ದು ಕಾರ್ಯಕರ್ತರಲ್ಲಿ ಸಮರ್ಥ ಮತ್ತು ದಕ್ಷ ವೈಚಾರಿಕ ಬದ್ಧತೆ ಬೆಳೆಸುವುದು ಸಾಮಾಜಿಕ ಸಂವೇದನೆ ಜವಾಬ್ದಾರಿ ಮೂಡಿಸುವ ಉದ್ದೇಶ ಈ ಪ್ರಶಿಕ್ಷಣದ ಮಹತ್ವ ಎಂದು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಸಮಗ್ರ ಕಾರ್ಯಕ್ರಮದ ಬಗ್ಗೆ ವಿವರಿಸಿದ್ದರು.

ಕಾರ್ಯಕ್ರಮವನ್ನು ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ನಿರೂಪಿಸಿದರು.
ಪ್ರಶಿಕ್ಷಣದ ಸಹ ಸಂಚಾಲಕಿ ಶ್ರೀಮತಿ ಲತಾ ಸುರೇಶ್ ಶೆಟ್ಟಿ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.
ಮಂಡಲ ಉಪಾಧ್ಯಕ್ಷೆ ಶ್ರೀಮತಿ ರೂಪಾ ಬಾಬು ಪೈ ಒಂದೇ ಮಾತರಂ ಗೀತೆಯನ್ನ ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್.ಕೆ. ಎಸ್ .
ಮಂಗಳೂರು ನಿಕಟ ಪೂರ್ವ ಸಹ ಪ್ರಬಾರಿ *ರಾಜೇಶ್ ಕಾವೇರಿ, ಪ್ರಶಿಕ್ಷಣ ಸಹ ಸಂಚಾಲಕ ಕಿರಣ್ ಪೂಜಾರಿ ತೆಕ್ಕಟ್ಟೆ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *