ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ದಿನಾಂಕ 31-10-2017 ರ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ದಾಖಲೆಗಳು ಸರಿಯಾಗಿದ್ದು ಜಿಲ್ಲಾ ಪಂಚಾಯತಿಯಿಂದ ಅನುಮೋದನೆಯಾಗದೆ ಹೆಚ್ಚುವರಿಯಾಗಿ ಸೇವೆ ಸಲ್ಲಿಸುತ್ತಿರುವ 08 ಬಿಲ್ ಕಲೆಕ್ಟರ್ ಮತ್ತು16 ಡಾಟಾ ಎಂಟ್ರಿ ಅಪರೇಟರ್ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಅನುಮೋದನೆ ನೀಡುವಂತೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದ.ಕ.ಜಿಲ್ಲಾ ಪಂಚಾಯತ್ ಇವರು ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಇವರಿಗೆ ಕೋರಿರುತ್ತಾರೆ.

ಗ್ರಾಮೀಣ ಭಾಗದಲ್ಲಿರುವ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಸೇವೆಗಳನ್ನು ನೀಡುತ್ತಿರುವ ಮುಂಚೂಣಿ ಕಾರ್ಯಾಲಯವಾದ ಗ್ರಾಮ ಪಂಚಾಯತಿಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸದರಿ ಹೆಚ್ಚುವರಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ನೇಮಕಾತಿಗೆ ಅರ್ಹರಿದ್ದು ಸದರಿ ಹೆಚ್ಚುವರಿ ಸಿಬ್ಬಂದಿಗಳ ನೇಮಕಾತಿಗೆ ಕೂಡಲೇ ಅನುಮೋದನೆ ನೀಡಲು ಸೂಕ್ತ ಕ್ರಮವಹಿಸುವಂತೆ ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ಆಯುಕ್ತಾಲಯ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಇವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರುರವರು ಪತ್ರ ಬರೆದು ಕೋರಿರುತ್ತಾರೆ ಮತ್ತು ದೂರವಾಣಿ ಮೂಲಕ ಆಯುಕ್ತರನ್ನು ಸಂಪರ್ಕಿಸಿ ಸದರಿ ಪ್ರಸ್ತಾವನೆಗೆ ಕೂಡಲೇ ಅನುಮೋದನೆ ನೀಡಲು ಕ್ರಮವಹಿಸುವಂತೆ ಕೋರಿದಾಗ ಪೂರಕವಾಗಿ ಸ್ಪಂದಿಸಿದ ಆಯುಕ್ತರು ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿ ಅನುಮೋದನೆ ನೀಡಲು ಕ್ತಮವಹಿಸುವುದಾಗಿ ತಿಳಿಸಿದರು.

