ಉಡುಪಿ: ನ. 28ರಂದು ಉಡುಪಿಯಲ್ಲಿ ನಡೆದ ಲಕ್ಷ ಕಂಠ ಗೀತಾ ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಯಾರೆ ಚಿತ್ರಗಳನ್ನು ಬರೆದು ತಮ್ಮ ಅಭಿಪ್ರಾಯಗಳು, ಕನಸುಗಳು ಮತ್ತು ದೇಶದ ಬಗ್ಗೆ ಇರುವ ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು. ಈ ಚಿತ್ರಗಳಲ್ಲಿ ಮಕ್ಕಳ ಸರಳ ಮನಸ್ಸಿನ ಮಾತುಗಳು, ದೇಶಾಭಿಮಾನ ಮತ್ತು ಪ್ರಧಾನಿಯ ಮೇಲಿನ ವಿಶ್ವಾಸ ಸ್ಪಷ್ಟವಾಗಿ ಮೂಡಿಬಂದಿದೆ.

ಮಕ್ಕಳನ್ನು ಬರವಣಿಗೆಯ ಮೂಲಕ ತಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಪ್ರೇರೇಪಿಸಲಾಯಿತು. ಪ್ರಧಾನಿ ಮೋದಿಯವರ ಕಾರ್ಯಶೈಲಿ, ದೇಶದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಯುವಜನತೆಗೆ ನೀಡುತ್ತಿರುವ ಪ್ರೋತ್ಸಾಹದ ಕುರಿತು ಮಕ್ಕಳು ತಮ್ಮ ಚಿತ್ರಗಳಲ್ಲಿ ಉಲ್ಲೇಖಿಸಿದ್ದಾರೆ.

ಮಕ್ಕಳಿಂದ ಬಂದ ಈ ಚಿತ್ರಗಳಿಗೆ ಪ್ರತಿಯಾಗಿ ಪ್ರಧಾನಮಂತ್ರಿ ಕಚೇರಿಯಿಂದ ಪ್ರಶಂಸಾ ಪತ್ರವನ್ನು ಕಳುಹಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಅಪಾರ ಉತ್ಸಾಹ ಮತ್ತು ಸಂತಸಕ್ಕೆ ಕಾರಣವಾಗಿದೆ.

ಪತ್ರ ಬರೆದ ಎಲ್ಲಾ ಮಕ್ಕಳ ವಿಳಾಸಕ್ಕೆ ಪ್ರತಿಯನ್ನು ಕಳಿಸಲಾಗಿದ್ದು, ಕಾರ್ಕಳ ತಾಲೂಕಿನ ಬೆಲ್ಮನ್ ನ ಉದ್ಯಮಿ ಶರತ್ ಹೆಗ್ಡೆ ಮಗ ಆಯುಷ್ ಹೆಗ್ಡೆ ಕೊಟ್ಟ ಚಿತ್ರಕ್ಕೆ ಮೋದಿ ನೀಡಿದ ಪ್ರಶಂಸೆ ಅವರನ್ನು ಆನಂದದಲ್ಲಿರಿಸಿದೆ. ಆಯುಷ್ ಈಗ ಎಮ್ಐಟಿ ವಿದ್ಯಾರ್ಥಿ.
ಪ್ರಧಾನಿ ಬದ್ಧತೆ ನೋಡಿ ಹೆಮ್ಮೆ, ಸಣ್ಣ ವಿಷಯಕ್ಕೂ ಅವರು ತೋರುವ ಶ್ರದ್ದೆ ಹೆಮ್ಮೆ ತರಿಸಿದೆ.

ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿದಂತೆ, ದೇಶದ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರವೂ ಮಹತ್ವದ್ದೆಂಬ ಸಂದೇಶವು ಸಮಾಜಕ್ಕೆ ತಲುಪಿದೆ.

Leave a Reply

Your email address will not be published. Required fields are marked *