ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂಗ್ರಹವಾದ ಮೊತ್ತದಲ್ಲಿ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಗಣೇಶ್ ಕರ್ಮಲ ಅವರನ್ನು ವಜ್ರತೇಜಸ್ ತಂಡದಿಂದ ಯೇನೇಪೋಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸಹಾಯಧನ ನೀಡಿದರು.


ಈ ಸಂದರ್ಭದಲ್ಲಿ ವಜ್ರತೇಜಸ್ ಹಿಂದೂ ಕವಚ್ ಇದರ ಅಧ್ಯಕ್ಷರಾದ ಮುರಳಿಕೃಷ್ಣ ಹಸಂತಡ್ಕ, ವಿ. ಹಿಂ. ಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಪುತ್ತೂರು ನಗರ ಕಾರ್ಯದರ್ಶಿ ಜಿತೇಶ್ ಬಲ್ನಾಡು, ಪುತ್ತೂರು ನಗರ ಬಜರಂಗದಳ ಸಂಯೋಜಕ್ ಜಯಂತ್ ಕುಂಜೂರುಪಂಜ, ಪುತ್ತೂರು ನಗರ ಸಪ್ತಾಹಿಕ್ ಮಿಲನ್ ಪ್ರಮುಖ್ ಸಂದೀಪ್ ಸಿಂಗಾಣಿ ಉಪಸ್ಥಿತರಿದ್ದರು.






