ಪುತ್ತೂರು:
ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಸಾನದಲ್ಲಿ ಬಾಲಗೋಪತಿಗೆ ಮೂಡಪ್ಪ ಸೇವೆಯು ಜ.6ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಿ.15ರಿಂದ ದೇವಳದಲ್ಲಿ ಸೇವಾ ರಶೀದಿಯನ್ನು ಭಕ್ತಾದಿಗಳಿಗೆ ವಿತರಿಸಲಾಗುತ್ತಿದೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಳದ ಪ್ರಧಾನ ಅರ್ಚಕರ ವೇ. ಮೂ. ವಸಂತ ಕೆದಿಲಾಯ ಅವರು ವಿಶೇಷ ಪ್ರಾರ್ಥನೆ ನೆರವೇರಿಸುವರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪುಂಜಿಗದ್ದೆ, ಸದಸ್ಯರಾದ ಮಹಾಬಲ ರೈ ವಳ್ತಾಡಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ವಿನಯ ಸುಬ್ರಹ್ಮಣ್ಯ, ದಿನೇಶ್ ಪಿ.ವಿ., ನಳಿನಿ ಪಿ. ಶೆಟ್ಟಿ, ಕೇಶವ ಬೇಡಿಕರ್, ಪುತ್ತೂರು ವಾಣಿ೯ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕುಮಾರ್ ಕಲ್ಲಾಜೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.




ಮೂಡಪ್ಪ ಸೇವೆಯ ಅಂಗವಾಗಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮಗಳು ಹಾಗೂ ಮಹಾಪೂಜೆಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.




