ಕಾರ್ಕಳ : ಅಮ್ಮ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ನಿಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ನೀರು ನಿಂತಿದ್ದ ಕಲ್ಲುಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸುಮಂತ್‌ನ ಮೊಬೈಲ್‌ ಅನ್ನು ದುರಸ್ತಿಗೆ ನೀಡಲಾಗಿದ್ದು, ಹೊಸ ಮೊಬೈಲ್ ಕೊಡಿಸುವಂತೆ ಅಮ್ಮನಲ್ಲಿ ಹಠ ಹಿಡಿದಿದ್ದ. ಕೆಲ ತಿಂಗಳು ಕಳೆದ ಬಳಿಕ ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಸುರೇಖಾ ಭರವಸೆ ನೀಡಿದ್ದಾಗ್ಯೂ ಆತ ಮನೆಬಿಟ್ಟು ತೆರಳಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಮಂತ್ ತಂದೆ ಮಂಜುನಾಥ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ತಾಯಿ ಅವರಿಗೆ ಸುಮಂತ್ ಏಕೈಕ ಮಗನಾಗಿದ್ದನು.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 56/2025 ಕಲಂ: 194 BNS ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *