ಪುತ್ತೂರು: ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರೆಂಟಿ (ವಿಬಿಜಿ ರಾಮ್ ಜಿ) ಯೋಜನೆ ಕುರಿತು ಕಾಂಗ್ರೆಸ್ ಪಕ್ಷ ಅನಗತ್ಯವಾಗಿ ಬೀದಿಗಿಳಿದಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಉಪ್ಪಿನಂಗಡಿಯಲ್ಲಿ ಪುತ್ತೂರು ಬಿಜೆಪಿ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ವಿಬಿಜಿ ರಾಮ್ ಜಿ ಯೋಜನೆ ಕುರಿತು ಜನಜಾಗೃತಿ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಾಂಧೀಜಿ ಮೇಲಿನ ಪ್ರೀತಿಗಿಂತ ಗಾಂಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವ ಅವಕಾಶ ಕೈತಪ್ಪಿದ ಕಾರಣಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ ಎಂದು ಟೀಕಿಸಿದರು.

ಈ ಹಿಂದೆ ಇದೇ ಯೋಜನೆಯ ಹೆಸರನ್ನು ಎಂಟು ಬಾರಿ ಬದಲಾಯಿಸಿದಾಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ 9ನೇ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಸರು ಬದಲಾಯಿಸಿದಾಗ ಕಾಂಗ್ರೆಸ್ ಚಡಪಡಿಸುತ್ತಿದೆ. ಇದು ಹೆಸರು ಬದಲಾವಣೆಗೆ ವಿರೋಧವಲ್ಲ, ಗಾಂಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವ ಅವಕಾಶ ತಪ್ಪಿದದ್ದರಿಂದ ಎಂದು ಅವರು ಹೇಳಿದರು.
ಯೋಜನೆಯಡಿ 100 ದಿನಗಳ ಉದ್ಯೋಗಾವಧಿಯನ್ನು 120 ದಿನಗಳಿಗೆ ಹೆಚ್ಚಿಸಿದರೆ ಕಾಂಗ್ರೆಸ್‌ಗೆ ಏಕೆ ಸಿಟ್ಟು? ವೇತನ ಪಾವತಿಗೆ ತಿಂಗಳುಗಳ ಕಾಲ ಕಾಯಬೇಕಾಗಿದ್ದ ಸ್ಥಿತಿಗೆ ಬದಲಾಗಿ 15 ದಿನಗಳೊಳಗೆ ಪಾವತಿ ಮಾಡುವ ಕ್ರಮಕ್ಕೆ ಏಕೆ ವಿರೋಧ? ನಿಜವಾದ ದುಡಿಮೆದಾರರ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಿ ನೈಜ ಫಲಾನುಭವಿಗಳನ್ನು ಗುರುತಿಸುವ ಕ್ರಮಕ್ಕೂ ಏಕೆ ವಿರೋಧ? ಎಂದು ಪ್ರಶ್ನಿಸಿದರು. ಗಾಂಧಿ ಹೆಸರಿನಲ್ಲಿ ಲಾಭ ಪಡೆಯುವ ಅವಕಾಶವನ್ನು ಪ್ರಧಾನಿ ಮೋದಿ ನಿರಾಕರಿಸಿರುವುದೇ ಕಾಂಗ್ರೆಸ್ ನಾಯಕರನ್ನು ಕಂಗಾಲಾಗಿಸಿ ಬೀದಿಗಿಳಿಯಲು ಕಾರಣವಾಗಿದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಹಾಗೂ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ತುಷ್ಠೀಕರಣ ನೀತಿಯನ್ನು ಖಂಡಿಸಿದರು.

ಉಪ್ಪಿನಂಗಡಿಯ ಹೆದ್ದಾರಿಯ ಅಂಡರ್‌ಪಾಸ್‌ನಿಂದ ಪ್ರಾರಂಭವಾದ ಪಾದಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣದಲ್ಲಿ ಸಮಾಪ್ತಿಯಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಟಂದೂರು, ಬಿಜೆಪಿ ಮುಖಂಡರಾದ ದಯಾನಂದ ಉಜಿರೆಮಾರ್, ಶಿವಕುಮಾರ್, ಕರುಣಾಕರ, ಪ್ರೇಮಾನಂದ ಶೆಟ್ಟಿ, ಪ್ರಸನ್ನ ಮಾರ್ತ, ಆರ್.ಸಿ. ನಾರಾಯಣ, ವಿದ್ಯಾ ಗೌರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಂದಪ್ಪ ಮೂಲ್ಯ, ಸುನಿಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್. ಉಮೇಶ್ ಶೆಣೈ, ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ಸುರೇಶ್ ಅತ್ರಮಜಲು, ಆದೇಶ್ ಶೆಟ್ಟಿ, ಸಂತೋಷ್ ಪರಂದಾಜೆ, ಪ್ರಸಾದ್ ಭಂಡಾರಿ, ಶೌಕತ್ ಅಲಿ, ಉಷಾ ಮುಳಿಯ, ಶೋಭಾ ದಯಾನಂದ, ವನಿತಾ, ಸದಾನಂದ ಶೆಟ್ಟಿ, ನವೀನ್ ಪದಬರಿ, ನಿತೀನ್ ತಾರಿತ್ತಡಿ, ಜಯಂತಿ ರಂಗಾಜೆ, ಪ್ರಕಾಶ್ ರೈ ಬೆಳ್ಳಿಪಾಡಿ, ಧನಂಜಯ ನಟ್ಟಿಬೈಲ್, ದಯಾನಂದ ಸರೋಳಿ, ಯುವರಾಜ್ ಪೆರಿಯತ್ತೋಡಿ, ಸದಾನಂದ ಪೂಜಾರಿ, ಮೋಹನ್ ಪಕ್ಕಳ, ನಾಗೇಶ್ ಟಿ.ಎಸ್., ವಿರೂಪಾಕ್ಷ ಭಟ್, ಲಕ್ಷ್ಮಣ ಗೌಡ ಬೆಳ್ಳಿಪಾಡಿ, ಗಂಗಾಧರ ನೆಕ್ಕರಾಜೆ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *