ಕಡಬ: ಸರಕಾರಿ ಆಸ್ಪತ್ರೆಯ ಸಮೀಪದ ಪಂಜ ರಸ್ತೆಯಲ್ಲಿ ವಿದ್ಯುತ್ ಕಂಬ ತೆರವು ಮಾಡದೇ ಅದೇ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ನಡೆಸಲು ತಯಾರಿ ನಡೆದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾರಿಗೆಗೆ ಅಡ್ಡಿಯಾಗುವ ರೀತಿಯಲ್ಲಿ ಕಂಬ ಉಳಿದಿರುವುದರಿಂದ ಭವಿಷ್ಯದಲ್ಲಿ ಅಪಾಯದ ಸಾಧ್ಯತೆಗಳಿದ್ದು, ಕಾಮಗಾರಿ ಪ್ರಾರಂಭಕ್ಕೂ ಮೊದಲು ವಿದ್ಯುತ್ ಇಲಾಖೆಯ ಸಹಕಾರದಿಂದ ಕಂಬವನ್ನು ಸ್ಥಳಾಂತರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.


