ಬೆಂಗಳೂರು: ಚಿತ್ರಮಂದಿರವೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ನೇಪಾಳ ಮೂಲದ ಯುವಕನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನೇಪಾಳ ಮೂಲದ 15 ವರ್ಷದ ಯುವಕನನ್ನು ಸಿನಿಮಾ ವೀಕ್ಷಕರೇ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಡಿವಾಳದ ಬಿ.ಪಿ ರಸ್ತೆಯಲ್ಲಿರುವ ಚಿತ್ರಮಂದಿರದಲ್ಲಿ ನೇಪಾಳಿ ಮೂಲದ ವ್ಯಕ್ತಿಯೊಬ್ಬ ಹೌಸ್‌ ಕೀಪಿಂಗ್‌ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದಾನೆ.

ಇತ್ತೀಚೆಗೆ ಆತನ ಅಣ್ಣನ ಮನೆಗೆ ಮಗ ಬಂದಿದ್ದ. ಈತನೊಂದಿಗೆ ವಾಸವಿದ್ದನು. ಭಾನುವಾರ ಕೆಲಸಕ್ಕೆ ಹೋಗುವಾಗ ಅಣ್ಣನ ಮಗನನ್ನು ತಾನು ಕೆಲಸ ಮಾಡುತ್ತಿದ್ದ ಚಿತ್ರಮಂದಿರಕ್ಕೆ ಕರೆದುಕೊಂಡು ಬಂದ್ದಿದ್ದಾನೆ. ಈ ವೇಳೆ ಆ ಯುವಕ ಮಹಿಳಾ ಶೌಚಾಲಯಕ್ಕೆ ತೆರಳಿ ರಹಸ್ಯ ಕ್ಯಾಮೆರಾ ಇಟ್ಟು ಬಂದಿದ್ದನು. ಈ ವೇಳೆ ಮಹಿಳೆಯೊಬ್ಬರು ಶೌಚಾಲಯಕ್ಕೆ ತೆರಳಿದ್ದ ವೇಳೆ ಅಲ್ಲಿ ರಹಸ್ಯ ಕ್ಯಾಮೆರಾವನ್ನು ಇರಿಸಿರುವುದು ಕಣ್ಣಿಗೆ ಬಿದ್ದಿದೆ. ಅದರಿಂದ ಗಾಬರಿಗೊಂಡ ಮಹಿಳೆ ವಿಚಾರ ಚಿತ್ರಮಂದಿರದ ಸಿಬ್ಬಂದಿಗೆ ತಿಳಿಸಿದ್ದಾರೆ. ಅಲ್ಲದೆ, ಅದೇ ಸಂದರ್ಭದಲ್ಲಿ ಓಡಾಡುತ್ತಿದ್ದ ಯುವಕನ್ನು ಹಿಡಿದು ಪ್ರಶ್ನಿಸಿದಾಗ ಆತ ತನ್ನು ತಪ್ಪೊಪ್ಪಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *