ಪುತ್ತೂರು: ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ (AIKMCC) ಪುತ್ತೂರು ತಾಲೂಕು ನೂತನ ಸಮಿತಿಯ ಮಹಾಸಭೆ ದಿನಾಂಕ 27-01-2026 ರಂದು ಸಂಜೆ 6.30ಕ್ಕೆ ಪುತ್ತೂರು ಬೈಪಾಸ್‌ನ ಅಸ್ಮಿ ಕಂಫರ್ಟ್ ಸಭಾಭವನದಲ್ಲಿ ಭವ್ಯವಾಗಿ ಜರುಗಿತು.

ಮುಖ್ಯ ಸಂರಕ್ಷಕರು
ಸಯ್ಯದ್ ಅಫಾಮ್ ಅಲಿ ತಂಗಳ್

ಅಧ್ಯಕ್ಷರು
ಅಬೂಬಕ್ಕರ್ ಮುಲಾರ್

ಕೋಶಾಧಿಕಾರಿ
ಅಝೀಜ್ ಬಪ್ಪಲಿಗೆ

ಪ್ರಧಾನ ಕಾರ್ಯದರ್ಶಿ
ಹನೀಫ್ ಮಧುರ

ಕೇರಳ ರಾಜ ಮನೆತನದ ಕೊಡಪ್ಪನಕಲ್ ತರವಾಡ್ ಹಾಗೂ ಪಾಣಕ್ಕಾಡ್ ಮರ್ಹೂಂ ಸೈಯದ್ ಶಿಹಾಬ್ ತಂಙಳ್ ಅವರ ಹೆಸರಿನಲ್ಲಿ ಜಗತ್ತಿನಾದ್ಯಂತ ಕಾರುಣ್ಯ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಅತಿದೊಡ್ಡ ಸೇವಾ ಸಂಘಟನೆಗಳಲ್ಲೊಂದಾದ AIKMCC ಯ ಪುತ್ತೂರು ತಾಲೂಕು ಸಮಿತಿ ಈ ಮಹಾಸಭೆಯ ಮೂಲಕ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
ಕಾರ್ಯಕ್ರಮವನ್ನು AIKMCC ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಅಫ್ಹಂ ಅಲಿ ತಂಙಳ್ (ಪುತ್ತೂರು) ಅವರು ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿ, ನೂತನ ಸಮಿತಿಯನ್ನು ರಚಿಸಿದರು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಕತ್ತಾರ್ ಇಬ್ರಾಹಿಂ ಹಾಜಿ ಮಂಡೆಕೋಳು (ಖಜಾಂಜಿ, AIKMCC ದ.ಕ. ಜಿಲ್ಲೆ), ತಾಜುದ್ದೀನ್ ಟರ್ಲಿ (ಮೀಡಿಯಾ ವಿಂಗ್, AIKMCC ದ.ಕ. ಜಿಲ್ಲೆ), ಕಲಂದರ್ ಎಲಿಮಲೆ (ಅಧ್ಯಕ್ಷರು, AIKMCC ಸುಳ್ಯ), ವೈ.ಕೆ.ಪಿ. ಮೊಹಮ್ಮದ್ ರಫೀಕ್, ಮುಜೀಬ್ ತಲಂಗಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಂಘಟನೆಯ ಬಲವರ್ಧನೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.
ಜಿಲ್ಲೆಯಾದ್ಯಂತ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಮುಂದಿನ ತಿಂಗಳಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು. ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ರೂಪಿಸಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಲಾಯಿತು.
ಎಐಕೆಎಂಸಿಸಿ ಪುತ್ತೂರು ತಾಲೂಕು ನೂತನ ಸಮಿತಿಯ ಪದಾಧಿಕಾರಿಗಳು ಹೀಗಿದ್ದಾರೆ:
ಮುಖ್ಯ ಸಂರಕ್ಷಕರು (Chief Patron):
▪️ ಸಯ್ಯಿದ್ ಅಫ್ಹಂ ಅಲಿ ತಂಙಳ್
ಅಧ್ಯಕ್ಷರು (President):
▪️ ಅಬೂಬಕ್ಕರ್ ಮುಲಾರ್
ಪ್ರಧಾನ ಕಾರ್ಯದರ್ಶಿ (General Secretary):
▪️ ಮೊಹಮ್ಮದ್ ಹನೀಫ್ ಮದುರಾ
ಖಜಾಂಚಿ (Treasurer):
▪️ ಅಬ್ದುಲ್ ಅಝೀಝ್ ಬಪ್ಪಳಿಗೆ
ಕಾರ್ಯನಿರ್ವಹಣಾ ಅಧ್ಯಕ್ಷರು (Working President):
▪️ ಹನೀಫ್ ಮುಕ್ವೆ
ಕಾರ್ಯನಿರ್ವಹಣಾ ಕಾರ್ಯದರ್ಶಿ (Working Secretary):
▪️ ಯೂಸೂಫ್ ಸಾಲ್ಮಾರ
ಉಪಾಧ್ಯಕ್ಷರು (Vice Presidents):
▪️ ಮಾಡನ್ನೂರು ಖಾಲಿದ್
▪️ ಜುಬೈರ್ ಬಪ್ಪಳಿಗೆ (ಯುಕೆ)
ಸಂಯುಕ್ತ ಕಾರ್ಯದರ್ಶಿಗಳು (Joint Secretaries):
▪️ ಎ.ಜಿ. ಇಸುಬು
▪️ ಅತೀಶ್ ಬಿ
▪️ ಇಬ್ರಾಹಿಂ ಬತೀಶ್ (ಲವ್ಲಿ ಸಿಲ್ಕ್)
ಪ್ಯಾಲಿಯೇಟಿವ್ ಕೇರ್ ಸಮಿತಿ:
▪️ ಅನೀಸ್ ಕೆ.ಎಸ್
▪️ ಶೇಖ್ ನಿಜಾಮ್ ಮುಕ್ವೆ
▪️ ಸಿದ್ದೀಕ್ ಹಾಜಿ ಕಾವು
▪️ ಹಸೈನಾರ್ ಸಿ.ಕೆ. ಮಾಡನ್ನೂರು
ಮಾಧ್ಯಮ ಸಂಯೋಜಕರು (Media Coordinators):
▪️ ಜಬ್ಬಾರ್ ಕೆಎಂಸಿಸಿ
▪️ ಅಬ್ದುಲ್ ಕಲಂದರ್ ಸಂಪ್ಯ
▪️ ಕೆ.ಎಂ. ರಫೀಕ್ ಬೆಟ್ಟಂಪಾಡಿ
ಟ್ರಾಮಾ ಕೇರ್ – ರಕ್ತದಾನ ವಿಭಾಗ:
▪️ ಹನೀಫ್ ನಂದಿನಿ
ಟ್ರಾಮಾ ಕೇರ್:
▪️ ರಫೀಕ್ ಮಾಡನ್ನೂರು
ಕಾರ್ಯಕಾರಿ ಸದಸ್ಯರು (Executive Members):
▪️ ಶೇಖ್ ಮೊಹಮ್ಮದ್ ರಫೀಕ್
▪️ ಜುಬೈರ್ ಮಾಡನ್ನೂರು
▪️ ಮೊಹ್ಸಿನ್ ಮಾಡನ್ನೂರು
▪️ ಎನ್. ಅಬ್ದುಲ್ ರಹ್ಮಾನ್
▪️ ಅಬ್ದುಲ್ ಶಮ್ಸೀರ್ (ಗ್ಲಿಟರ್ ಫ್ಯಾನ್ಸಿ)

Leave a Reply

Your email address will not be published. Required fields are marked *