ಪುತ್ತೂರು : ನಗರದ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಮಾರ್ಚ್ 15ರಿಂದ ‘ನ್ಯೂ ಚೆನ್ನೈ ಶಾಪಿಂಗ್ ಹಬ್ಬ’ ಮತ್ತೆ ಪ್ರಾರಂಭಗೊಂಡಿದ್ದು, ಮೊದಲ ದಿನವೇ ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮನೆಯ ಯಜಮಾನಿಯರಿಗೆ ಅಗತ್ಯವಾದ ವಿವಿಧ ರೀತಿಯ ಅಡುಗೆ ಮನೆ ಉಪಕರಣಗಳು, ಸ್ಟೀಲ್ ಪಾತ್ರೆಗಳು, ಯುವತಿಯರು ಹಾಗೂ ಮಹಿಳೆಯರಿಗೆ ಆಕರ್ಷಕ ಬ್ಯಾಗ್‌ಗಳು, ಮಕ್ಕಳ ಶಾಲಾ ಬ್ಯಾಗ್‌ಗಳು ಮತ್ತು ಆಟಿಕೆಗಳು ಇಲ್ಲಿ ಲಭ್ಯವಿವೆ. ಇದರೊಂದಿಗೆ ಕಿಟಕಿ–ಬಾಗಿಲಿನ ಪರದೆಗಳು, ಎಲ್ಲಾ ವಯೋಮಾನದವರ ಚಪ್ಪಲಿಗಳು, ಗೋಡೆ ಗಡಿಯಾರಗಳು, ಡೋರ್ ಮ್ಯಾಟ್‌ಗಳು, ವಿವಿಧ ಕಂಪನಿಗಳ ಪ್ಲಾಸ್ಟಿಕ್ ಕುರ್ಚಿಗಳು ಹಾಗೂ ಮನೆ–ಕಚೇರಿ ಅಲಂಕಾರಕ್ಕೆ ಅಗತ್ಯವಾದ ನೂರಕ್ಕೂ ಹೆಚ್ಚು ಬಗೆಯ ವಸ್ತುಗಳು ಮಾರಾಟಕ್ಕೆ ಇಡಲಾಗಿದೆ.

ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿರುವ ಈ ಶಾಪಿಂಗ್ ಹಬ್ಬದಲ್ಲಿ ಗ್ರಾಹಕರು ಖರೀದಿಸುವ ಯಾವುದೇ ವಸ್ತುವಿನ ಬೆಲೆ ಕೇವಲ ₹180 ಎಂದು ವಿಶೇಷ ಆಫರ್ ನೀಡಲಾಗಿದೆ.
ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂದಿದೆ. ಶಾಪಿಂಗ್ ಹಬ್ಬಕ್ಕೆ ಇನ್ನಷ್ಟು ಗ್ರಾಹಕರು ಆಗಮಿಸಿ ಸಹಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *