ಪುತ್ತೂರು:ಪುತ್ತೂರು ತಾಲ್ಲೂಕು ಬಲ್ನಾಡು ವಿನಾಯಕನಗರ ಕ್ರೀಡಾಂಗಣದ ಬಳಿಯಲ್ಲಿ ಪುತ್ತೂರು ದ್ವಾರಕಾ ಪ್ರತಿಷ್ಠಾನದ ಮೂಲಕ ನಿರ್ಮಿಸಿ ಕೊಡುಗೆಯಾಗಿ ನೀಡಲಾದ ಸಾರ್ವಜನಿಕ ಶೌಚಾಲಯದ ಉದ್ಘಾಟನೆ ಕಾರ್ಯಕ್ರಮ ಸೋಮವಾರ ನಡೆಯಿತು.

ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿದರು. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸರಕಾರದ ಅನುದಾನ ಬಳಕೆ ಮಾಡದೆ ಸಿಎನ್ಜಿ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ದಾನಿಗಳ ನೆರವಿನೊಂದಿಗೆ ಮಾಡಲಾಗಿದೆ. ಸ್ವಚ್ಛತೆಗೆ ಆದ್ಯತೆಗಾಗಿ ಸುಮಾರು ೧೫ ಸಾವಿರ ಬಕೆಟ್ಗಳನ್ನು ನೀಡಿಲಾಗಿದೆ. ಸಾರ್ವಜನಿಕ ಸಹಕಾರ, ದಾನಿಗಳ ನೆರವಿನಿಂದ ನಗರಸಭೆಯನ್ನು ಮಾದರಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ಇದೀಗ ನಗರಸಭೆಯಲ್ಲಿ ಅನುದಾನ ಕೊರತೆಯಾದಾಗ ದ್ವಾರಕ ಸಂಸ್ಥೆಯ ಗೋಪಾಲಕೃಷ್ಣ ಭಟ್ ಮೂಲಕ ಒಂದು ಶೌಚಾಲಯವನ್ನು ನೀಡಲಾಗಿದೆ. ಇನ್ನೊಂದು ಶೌಚಾಲಯವನ್ನು ನಿರ್ಮಿಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಇದು ಗುಣಮಟ್ಟದಲ್ಲಿ ನಿರ್ಮಾಣವಾಗಿದ್ದು, ೫೦ ವರ್ಷಗಳ ಪ್ರಯೋಜನಕ್ಕೆ ಲಭ್ಯವಾಗಲಿದೆ. ಅದರ ಸ್ವಚ್ಛತೆ ಜವಾಬ್ದಾರಿಯನ್ನು ಸ್ಥಳೀಯರು, ಸಂಘ ಸಂಸ್ಥೆಗಳು ನಿರ್ವಹಿಸಬೇಕು ಎಂದರು.

ನಗರಸಭಾ ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ಈ ಭಾಗದಲ್ಲಿ ಶೌಚಾಲಯದ ಆವಶ್ಯಕತೆ ಬಂದಾಗ ಖಾಸಗಿ ಜಾಗವಾದ ಕಾರಣ ನಗರಸಭೆ ಅನುದಾನ ಅಸಾಧ್ಯ ಎಂಬ ಮಾತು ಬಂತು. ಈ ಸಂದರ್ಭದಲ್ಲಿ ದಾನಿ ಗೋಪಾಲಕೃಷ್ಣ ಭಟ್ ಅವರನ್ನು ಸಂಪರ್ಕಿಸಿದಾಗ ಅವರು ಒಪ್ಪಿಕೊಂಡು ಶೌಚಾಲಯ ನಿರ್ಮಿಸಿದ್ದಾರೆ. ಪುತ್ತೂರಿನ ಹಲವು ಆವಶ್ಯಕತೆಗಳಿಗೆ ನೆರವು ನೀಡುತ್ತಿರುವ ಅವರಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸ್ಥಳೀಯ ನಿಕಟಪೂರ್ವ ನಗರಸಭಾ ಸದಸ್ಯೆ ಪೂರ್ಣಿಮಾ ಕೃತಜ್ಞತೆ ಸಲ್ಲಿಸಿದರು. ಕ್ರೀಡಾಂಗಣದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತವೆ.





ಈ ಸಂದರ್ಭದಲ್ಲಿ ಅಗತ್ಯವಾಗಿರುವ ಶೌಚಾಲಯವನ್ನು ಖುಷಿ ನೀಡಿದೆ ಎಂದರು.
ದ್ವಾರಕ ಸಂಸ್ಥೆಯ ಗೋಪಾಲಕೃಷ್ಣ ಭಟ್,ಸ್ಥಳೀಯ ನಿಕಟಪೂರ್ವ ನಗರಸಭಾ ಸದಸ್ಯೆ ಪೂರ್ಣಿಮಾ,ದ್ವಾರಕಾ ಸಂಸ್ಥೆಯ ಅನಂತಕೃಷ್ಣ, ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ರವಿಕೃಷ್ಣ ಕಲ್ಲಾಜೆ,
ಪ್ರಕಾಶ್ ಅಶೋಕ್ ಬಲ್ನಾಡ್, ಸ್ಥಳೀಯರು ಉಪಸ್ಥಿತರಿದ್ದರು.




