ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ–ಐತ್ತೂರು ವಲಯದ ವಲಯ ಕಚೇರಿಯಲ್ಲಿ 2026ನೇ ಹೊಸ ವರ್ಷದ ಡೈರಿ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬಿಳಿನೆಲೆ ವಲಯ ಮೇಲ್ವಿಚಾರಕರಾದ ರವಿಪ್ರಸಾದ್ ಆಲಾಜೆ ಅವರು ನಿರೂಪಿಸಿ ಮಾತನಾಡಿದರು. ವಲಯದಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಇದುವರೆಗೆ ಸಾಧಿಸಿರುವ ಪ್ರಗತಿ ಹಾಗೂ ಮುಂದಿನ ಮೂರು ತಿಂಗಳಲ್ಲಿ ಕೈಗೊಳ್ಳಬೇಕಾದ ಅತಿ ತುರ್ತು ಕಾರ್ಯಗಳ ಕುರಿತು ವಿವರಿಸಿದರು. ಜೊತೆಗೆ ಜನವರಿ ತಿಂಗಳಲ್ಲಿ ಆಯೋಜಿಸಲಾಗುವ ಧಾರ್ಮಿಕ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಳಿನೆಲೆ–ಐತ್ತೂರು ವಲಯದ ಅಧ್ಯಕ್ಷರಾದ ಡಿಕೇಶ್ ಗೌಡ ಕೋಣಾಜೆ, ಧರ್ಮಪಾಲ ಗೌಡ ಕೈಕಂಬ, ಸತೀಶ್ ಚಂದ್ರ ರೈ ಬಂಟ್ರ, ಧರ್ಮಪಾಲ ಗೌಡ ಕೊಂಬಾರು ಹಾಗೂ ವಿನಯಕುಮಾರ್ (102ನೇ ನೆಕ್ಕಿಲಾಡಿ) ಉಪಸ್ಥಿತರಿದ್ದರು. ವಲಯ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೇನ್ಶ ಅವರಿಂದ ನೂತನ ವರ್ಷದ ಡೈರಿಯನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ವಿಚಕ್ಷಣಾಧಿಕಾರಿ ಶೀಲಾವತಿ, ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್, ಬಿಳಿನೆಲೆ–ಐತ್ತೂರು ವಲಯದ ಸೇವಾ ಪ್ರತಿನಿಧಿಗಳಾದ ದಿನೇಶ್, ವಿನೋದ್ ಕೆ.ಸಿ., ಸತೀಶ್ ಎ., ರೇಖಾ, ಭವಶ್ರೀ, ನೇತ್ರ ವಲಯದ ಸಿ.ವೈ.ಎಸ್.ಎಸ್.ಸಿ. ಸೇವಾದಾರರಾದ ರಕ್ಷಿತಾ ಹಾಗೂ ರಶ್ಮೀಕಾ ಉಪಸ್ಥಿತರಿದ್ದು, ನೂತನ ವರ್ಷ 2026ರ ಡೈರಿಯನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *