ವಿಧಾನ ಪರಿಷತ್ತಿನ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ರವರು ಕರ್ನಾಟಕ ವಿಧಾನ ಪರಿಷತ್ತಿನ 154 (ಡಿಸೆಂಬರ್ -2024) 155 (ಮಾರ್ಚ್ -2025) ಮತ್ತು 156 ನೇ (ಆಗುಸ್ಟ್ -2025) ಅಧಿವೇಶನದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳನ್ನು ಕೇಳಿದ್ದು, ಸದರಿ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖಾ ಸಚಿವರು ಇವರೆಗೂ ಉತ್ತರಿಸಿರುವುದಿಲ್ಲ.ಸದರಿ ಪ್ರಶ್ನೆಗಳು ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದರಿಂದ ಸದರಿ ಪ್ರಶ್ನೆಗಳಿಗೆ ಆದಷ್ಟು ಶೀಘ್ರವಾಗಿ ಲಿಖಿತ ಉತ್ತರ ನೀಡಲು ಸಂಬಂಧಪಟ್ಟ ಇಲಾಖಾ ಸಚಿವರಿಗೆ ಸೂಚಿಸುವಂತೆ ವಿಧಾನ ಪರಿಷತ್ತಿನ ಸಭಾಪತಿಯವತಿಗೆ ಶಾಸಕರು ಪತ್ರ ಬರೆದು ವಿನಂತಿಸಿದ್ದಾರೆ,

154 ನೇ ಅಧಿವೇಶನದ 03 ಪ್ರಶ್ನೆಗಳಿಗೆ ,155 ನೇ ಅಧಿವೇಶನದ 08 ಪ್ರಶ್ನೆಗಳಿಗೆ, 156 ನೇ ಅಧಿವೇಶನದ 07 ಪ್ರಶ್ನೆಗಳಿಗೆ ಒಟ್ಟು 18 ಪ್ರಶ್ನೆಗಳಿಗೆ ಉತ್ತರಿಸಲು ಬಾಕಿ ಇದೆ.ಅದರಲ್ಲಿ ಹೆಚ್ಚಿನ 09 ಪ್ರಶ್ನೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ್ದಾಗಿದೆ.







