ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ತನ್ನ ಗ್ರಾಹಕರಿಗಾಗಿ ವಿಶೇಷ ಓಲ್ಡ್ ಗೋಲ್ಡ್ ಎಕ್ಸ್ಚೇಂಜ್ ಮೇಳವನ್ನು ಘೋಷಿಸಿದೆ. ಪುತ್ತೂರು, ಮೂಡಬಿದ್ರೆ, ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಸ್ಥೆ ನಂಬಿಕೆ, ಪಾರದರ್ಶಕತೆ, ಶುದ್ಧತೆ ಹಾಗೂ ನವೀನ ವಿನ್ಯಾಸಗಳಿಗಾಗಿ ಪ್ರಸಿದ್ಧವಾಗಿದೆ.

ಫೆಬ್ರವರಿ 14ರಿಂದ ಫೆಬ್ರವರಿ 22ರವರೆಗೆ ನಡೆಯುವ ಈ ವಿಶೇಷ ಮೇಳದಲ್ಲಿ ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ಹೊಸ ವಿನ್ಯಾಸದ ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನು ಪಡೆಯಬಹುದು.
ಗ್ರಾಹಕರ ಹಳೆಯ ಚಿನ್ನವನ್ನು ಸ್ಥಳದಲ್ಲೇ ತಕ್ಷಣ ಪರೀಕ್ಷಿಸಿ, ಪ್ರಸ್ತುತ ಮಾರುಕಟ್ಟೆ ದರದ ಆಧಾರದ ಮೇಲೆ ಮೌಲ್ಯ ನಿಗದಿ ಮಾಡಲಾಗುತ್ತದೆ. ಯಾವುದೇ ಕಡಿತವಿಲ್ಲದೆ ವಿನಿಮಯ ಸೌಲಭ್ಯ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದರ ಜೊತೆಗೆ ಪ್ರತಿ ಗ್ರಾಂಗೆ ಹೆಚ್ಚುವರಿ ರೂ. 200 ಲಾಭ ಪಡೆಯುವ ವಿಶೇಷ ಅವಕಾಶವೂ ಲಭ್ಯವಿದೆ.

ಗುಣಮಟ್ಟದ ಸೇವೆ ಮತ್ತು ಆಕರ್ಷಕ ವಿನ್ಯಾಸಗಳೊಂದಿಗೆ ಗ್ರಾಹಕರಿಗೆ ವಿಶೇಷ ಅನುಭವ ನೀಡಲು ಸಂಸ್ಥೆ ಸಿದ್ಧವಾಗಿದೆ. ಆಸಕ್ತರು ಸಮೀಪದ ಶಾಖೆಯನ್ನು ಸಂಪರ್ಕಿಸಿ ಮೇಳದ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *