
ಚೆನ್ನೈ:
ಚೀನಾದಲ್ಲಿ ನಡೆಯಲಿರುವ ಏಷ್ಯನ್ ಬೀಚ್ ಕ್ರೀಡಾಕೂಟಕ್ಕೆ ಭಾರತೀಯ ಪುರುಷರು ಮತ್ತು ಮಹಿಳಾ ತಂಡವನ್ನು ಆಯ್ಕೆ ಮಾಡಲು, ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮುಕ್ತ ಆಯ್ಕೆ ಟ್ರಯಲ್ಸ್ ಅನ್ನು ಡಿಸೆಂಬರ್ 11 ಮತ್ತು 12, 2025ರಂದು ಚೆನ್ನೈನ ಎಸ್.ಆರ್.ಎಂ ಸಂಸ್ಥೆಯಲ್ಲಿ ನಡೆಸಲಾಗುತ್ತಿದೆ.
ವಾಲಿಬಾಲ್ ಫೆಡರೇಶನ್ ಹೊರಡಿಸಿರುವ ಆದೇಶದಂತೆ, ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಹರ್ಷ ಮತ್ತು ಕಾರ್ಯದರ್ಶಿ ಆಂಥೋನಿ ಜೋಸೆಫ್ ಅವರು ಕರ್ನಾಟಕದ ಆಸಕ್ತ ಆಟಗಾರರು ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸೂಚಿಸಿದ್ದಾರೆ.

ಹರ್ಷ ಆರ್
ಅಧ್ಯಕ್ಷರು
ಕರ್ನಾಟಕ ವಾಲಿಬಾಲ್ ಎಸೋಸಿಯೇಷನ್

ಆಂತೋನಿ ಜೋಸೆಫ್
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್

ಸಾಲ್ಮರ ಶರೀಫ್
ಕಾರ್ಯಕಾರಿ ಸದಸ್ಯರು
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್
ಟ್ರಯಲ್ಸ್‌ಗೆ ಅಗತ್ಯ ದಾಖಲೆಗಳು:
- ಮಾನ್ಯ ಪಾಸ್‌ಪೋರ್ಟ್ — ಮೂಲ ಮತ್ತು ಸ್ವಯಂ ದೃಢೀಕರಿಸಿದ ಪ್ರತಿಗಳು
- 5 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
- ಪ್ರಯಾಣ, ಊಟ, ವಸತಿ ಮತ್ತು ನೋಂದಣಿ ಶುಲ್ಕ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಆಟಗಾರರೇ ಭರಿಸಬೇಕು
- ಹೆಚ್ಚಿನ ಮಾಹಿತಿಗೆ: vfi2005@gmail.com
ಬೀಚ್ ವಾಲಿಬಾಲ್ ಆಟಗಾರರು ಡಿಸೆಂಬರ್ 11, ಬೆಳಿಗ್ಗೆ 8:00ಕ್ಕೆ ಟ್ರಯಲ್ಸ್ ಸಂಚಾಲಕರಾದ ಶ್ರೀ ಎಂ. ಪ್ರಭಾರನ್ ಅವರಿಗೆ ಹಾಜರಾಗಬೇಕು.
ಸಂಪರ್ಕ ಸಂಖ್ಯೆ: 098410 26062
ಈ ಮಾಹಿತಿಯನ್ನು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ಸಾಲ್ಮರ ಶರೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







