ಪುತ್ತೂರು: ಸೌಹಾರ್ದತೆಯ ದೃಷ್ಟಿಯನ್ನು ಮುಂದಿಟ್ಟುಕೊಂಡು ಕಿಲ್ಲೆ ಮೈದಾನದಲ್ಲಿ ನಡೆಯುವ 15ನೇ ವರ್ಷದ ಅಮರ್ ಅಕ್ಟರ್ ಆಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಡಿ.23 ರಿಂದ 28ರ ತನಕ ನಡೆಯಲಿದೆ ಎಂದು ಪಂದ್ಯಾಟದ ಆಯೋಜಕ ರಜಾಕ್ ಬಪ್ಪಳಿಗೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಡಿ.23ಕ್ಕೆ ಬಪ್ಪಳಿಗೆ ಟೀಮ್ ಊರವರ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಸಂಜೆ ಗಂಟೆ 5ಕ್ಕೆ ಪ್ರಜ್ಞಾ ಆಶ್ರಮದ ನಿವಾಸಿಗಳು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಡಿ.24 ಮತ್ತು 25ಕ್ಕೆ ಗ್ರಾಮಗಳ 48 ತಂಡದಿಂದ ಹಳ್ಳಿ ಹುಡುಗರು ಪೇಟೆ ಟ್ರೋಫಿ ಪಂದ್ಯಾಟ ನಡೆಯಲಿದೆ.

ಡಿ.26ಕ್ಕೆ ವಿವಿಧ ಇಲಾಖೆಗಳ 16 ತಂಡಗಳ ಮತ್ತು ಪುತ್ತೂರು ಚಾಂಪಿಯನ್ ಪಂದ್ಯಾಟ ನಡೆಯಲಿದೆ. ಡಿ.27 ಮತ್ತು 28ಕ್ಕೆ ಒಪನ್ ಪಂದ್ಯಾಟವಾಗಿ ಅಮರ್ ಅಕ್ಟರ್ ಆಂತೋನಿ ರೋಲಿಂಗ್ ಟ್ರೋಫಿ ನಡೆಯಲಿದೆ. ಸಂಜೆ ಸಮಾರೋಪದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಾಯಿ ದೇ ದೇವುಸ್ ಚರ್ಚ್ನ ಉಪಾದ್ಯಕ್ಷ ಜೆರಾಲ್ಡ್ ಕ್ರಾಸ್ತ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಜಾದ್ ಸಹಿತ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಪ್ರತಿ ದಿನ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಅಮರ್ ಅಕ್ಟರ್ ಆಂತೋನಿಯ ಸದಸ್ಯರಾದ ಅರುಣ್ ಕುಮಾರ್ ಬಪ್ಪಳಿಗೆ, ಲಿಯೋ ಮುಕ್ರಂಪಾಡಿ, ಸೀತಾರಾಮ ಐಯ್ಯರ್ ಬಪ್ಪಳಿಗೆ ಉಪಸ್ಥಿತರಿದ್ದರು.








